ಮಂಗಳವಾರ, 26 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಜೂನಿಯರ್‌ ಏಷ್ಯಾ ಕಪ್‌ ಫೈನಲ್‌ಗೆ ಭಾರತ

Published 1 ಜೂನ್ 2023, 1:40 IST
Last Updated 1 ಜೂನ್ 2023, 1:40 IST
ಅಕ್ಷರ ಗಾತ್ರ

ಸಲಾಲ, ಒಮನ್‌: ಹೊಂದಾಣಿಕೆಯ ಆಟವಾಡಿದ ಭಾರತ ತಂಡ, ಜೂನಿಯರ್‌ ಏಷ್ಯಾ ಕಪ್‌ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ 9–1 ಗೋಲುಗಳಿಂದ ದಕ್ಷಿಣ ಕೊರಿಯಾ ತಂಡವನ್ನು ಮಣಿಸಿ ಫೈನಲ್‌ ಪ್ರವೇಶಿಸಿತು.

ಸಲಾಲ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಧಾಮಿ ಬಾಬಿ ಸಿಂಗ್ (31, 39 ಮತ್ತು 55ನೇ ನಿ.) ಅವರು ಭಾರತದ ಭರ್ಜರಿ ಗೆಲುವಿಗೆ ಕಾರಣರಾದರು.

ಲಾಕ್ರಾ ಸುನಿತ್ (13), ಅರಿಜೀತ್‌ ಸಿಂಗ್ (19), ಅಂಗದ್‌ ಬೀರ್‌ ಸಿಂಗ್ (34), ಉತ್ತಮ್‌ ಸಿಂಗ್ (38), ವಿಷ್ಣುಕಾಂತ್‌ ಸಿಂಗ್ (51) ಮತ್ತು ಶಾರದಾನಂದ್‌ ತಿವಾರಿ (57) ತಲಾ ಒಂದು ಗೋಲು ತಂದಿತ್ತರು.

ಗುರುವಾರ ನಡೆಯುವ ಫೈನಲ್‌ನಲ್ಲಿ ಭಾರತ ತಂಡ ಮಲೇಷ್ಯಾ ಅಥವಾ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT