ಹಾಂಗ್ಕಾಂಗ್: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಅವರು ಹಾಂಗ್ಕಾಂಗ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಬುಧವಾರ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಆದರೆ ಲಕ್ಷ್ಯ ಸೇನ್ ಮತ್ತು ಪ್ರಣಯ್ ಅವರು ಪ್ರಯಾಸದ ಗೆಲುವಿನೊಡನೆ ಎರಡನೇ ಸುತ್ತಿಗೆ ಮುನ್ನಡೆದರು.

ಆಗಸ್ಟ್ನಲ್ಲಿ ವಿಶ್ವ ಚಾಂಪಿಯನ್ಷಿಪ್ ಎಂಟರ ಘಟ್ಟ ತಲುಪಿದ್ದ ಸಿಂಧು, ಇಲ್ಲಿ 32ರ ಸುತ್ತಿನಲ್ಲಿ 21–15, 16–21, 29–21ರಲ್ಲಿ ಡೆನ್ಮಾರ್ಕ್ನ ಲೀನ್ ಕ್ರಿಸ್ಟೋಫರ್ಸೆನ್ ಅವರಿಗೆ ಮಣಿದರು. ಇದು ಭಾರತದ ಆಟಗಾರ್ತಿಗೆ, 25 ವರಷ ವಯಸ್ಸಿನ ಲೀನ್ ಎದುರು ಆರು ಮುಖಾಮುಖಿಗಳಲ್ಲಿ ಮೊದಲ ಸೋಲು ಎನಿಸಿತು.

ವಿಶ್ವ ಕ್ರಮಾಂಕದಲ್ಲಿ 34ನೇ ಸ್ಥಾನದಲ್ಲಿರುವ ಪ್ರಣಯ್ 21–17, 21–14 ರಿಂದ 14ನೇ ಶ್ರೇಯಾಂಕದ ಲು ಗುವಾಂಗ್ ಝು ಅವರನ್ನು 44 ನಿಮಿಷಗಳಲ್ಲಿ ಸೋಲಿಸಿ ಪ್ರಿಕ್ವಾರ್ಟರ್ಫೈನಲ್ ತಲುಪಿದರು. ಸೇನ್ 22–20, 16–21, 21–15 ರಿಂದ ಚೀನಾ ತೈಪೆಯ ವಾಂಗ್ ತ್ಜು ವಿ ಅವರನ್ನು ಮಣಿಸಿದರು. ಸೇನ್ ಮುಂದಿನ ಸುತ್ತಿನಲ್ಲಿ ಪ್ರಣಯ್ ಅವರನ್ನು ಎದುರಿಸಲಿದ್ದಾರೆ.

ಅರ್ಹತಾ ಸುತ್ತಿನಿಂದ ಬಂದಿರುವ ಕಿರಣ್ ಜಾರ್ಜ್ ಸಹ 16ರ ಸುತ್ತಿಗೆ ಕಾಲಿಟ್ಟರು. ಅವರು 21–16, 21–11 ರಿಂದ ತಮಗಿಂತ ಮೇಲಿನ ಕ್ರಮಾಂಕದ ಸಿಂಗಪುರದ ಆಟಗಾರ ಜಿಯಾ ಹೆಂಗ್ ಜೇಸನ್ ಅವರನ್ನು 34 ನಿಮಿಷಗಳಲ್ಲಿ ಸೋಲಿಸಿದರು. ಭಾರತದ ಆಟಗಾರ ಮುಂದಿನ ಸುತ್ತಿನಲ್ಲಿ ತೈವಾನ್ನ ಚೌ ಟಿಯನ್ ಚೆನ್ ಅವರನ್ನು ಎದುರಿಸಲಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ 31ನೇ ಸ್ಥಾನದಲ್ಲಿರುವ ಆಯುಷ್ ಶೆಟ್ಟಿ 15–21, 21–19, 21–13 ರಿಂದ ಚೀನಾ ತೈಪೆಯ ಸು ಲಿ ಯಾಂಗ್ ಅವರನ್ನು ಸೋಲಿಸಿ 16ರ ಸುತ್ತಿಗೆ ತಲುಪಿದರು.

ಮಹಿಳಾ ಡಬಲ್ಸ್ನಲ್ಲಿ ರುತುಪರ್ಣ ಮತ್ತು ಶ್ವೇತಪರ್ಣ ಪಂಡಾ 21–17, 21–9 ರಿಂದ ಹಾಂಗ್ಕಾಂಗ್ನ ಒಯಿ ಕಿ ವೆನೆಸಾ ಪೊಂಗ್– ಸುಮ್ ಯವು ವಾಂಗ್ ಜೋಡಿಯನ್ನು 28 ನಿಮಿಷಗಳಲ್ಲಿ ಸೋಲಿಸಿ 16ರ ಸುತ್ತು ತಲುಪಿತು. ಗುರುವಾರ ನಡೆಯುವ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಚೀನಾದ ಲುವೊ ಕ್ಸು ಮಿನ್– ಲಿ ಯಿ ಜಿಂಗ್ ಜೋಡಿಯನ್ನು ಎದುರಿಸಲಿದೆ.

ಚೀನಾ ತೈಪೆಯ ಚೆನ್ ಚೆಂಗ್ ಕುವಾಣ್– ಹ್ಸು ಯಹಿನ್ ಹುಯಿ ಜೋಡಿ 21–16, 21–11 ರಿಂದ ಧ್ರುವ್ ಕಪಿಲ– ತನಿಶಾ ಕ್ರಾಸ್ಟೊ ಜೋಡಿಯನ್ನು 31 ನಿಮಿಷಗಳಲ್ಲಿ ಹಿಮ್ಮೆಟ್ಟಿಸಿತು.
.ಮಹಿಳಾ ಏಷ್ಯಾ ಕಪ್: ಕೊರಿಯಾ ಮೇಲೆ ಭಾರತ ಸವಾರಿ?.ಬ್ಯಾಡ್ಮಿಂಟನ್: ಎರಡನೇ ಸುತ್ತಿಗೆ ಸಾತ್ವಿಕ್–ಚಿರಾಗ್ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.