ನವದೆಹಲಿ: ಆತಿಥೇಯ ಭಾರತ ಮಹಿಳೆಯರ ತಂಡವು 20ನೇ ಏಷ್ಯನ್ ಹ್ಯಾಂಡ್ಬಾಲ್ ಚಾಂಪಿಯನ್ಷಿಪ್ನಲ್ಲಿ ಶುಭಾರಂಭ ಮಾಡಿತು.

ಇಲ್ಲಿನ ಇಂದಿರಾ ಗಾಂಧಿ ಅರೇನಾದಲ್ಲಿ ಮಂಗಳವಾರ ಆರಂಭಗೊಂಡ ಟೂರ್ನಿಯ ರೋಚಕ ಪಂದ್ಯದಲ್ಲಿ ಭಾರತ 31–28ರಿಂದ ಹಾಂಗ್ಕಾಂಗ್ ತಂಡವನ್ನು ಮಣಿಸಿತು. ವಿರಾಮದ ವೇಳೆ 6 (16–10) ಪಾಯಿಂಟ್ಸ್ಗಳ ಮುನ್ನಡೆ ಪಡೆದಿದ್ದ ಆತಿಥೇಯ ತಂಡಕ್ಕೆ ಉತ್ತರಾರ್ಧದಲ್ಲಿ ಎದುರಾಳಿ ತಂಡವು ಪ್ರಬಲ ಪೈಪೋಟಿ ನೀಡಿತು.

ದಿನದ ಇತರ ಪಂದ್ಯಗಳಲ್ಲಿ ಜಪಾನ್ 34–14ರಿಂದ ಇರಾನ್ ತಂಡವನ್ನು; ಕಜಕಿಸ್ತಾನ 28–26ರಿಂದ ಚೀನಾ ತಂಡವನ್ನು; ಕೊರಿಯಾ 47–5ರಿಂದ ಸಿಂಗಪುರ ತಂಡವನ್ನು ಮಣಿಸಿದವು.

ಭಾರತದಲ್ಲಿ ಮೊದಲ ಬಾರಿ ಏಷ್ಯನ್ ಟೂರ್ನಿ ಆಯೋಜನೆಗೊಂಡಿದ್ದು, ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. ದೀಕ್ಷಾ ಕುಮಾರಿ ನಾಯಕತ್ವದಲ್ಲಿ 25 ಮಂದಿಯ ಭಾರತ ತಂಡವು ಏಷ್ಯಾದ ಅಗ್ರ ತಂಡಗಳೊಂದಿಗೆ ಸೆಣಸಲಿದೆ. ಜಪಾನ್, ಇರಾನ್ ಮತ್ತು ಹಾಂಗ್ಕಾಂಗ್ ತಂಡದೊಂದಿಗೆ ಭಾರತವು ಬಿ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಭಾರತವು ಬುಧವಾರ ಇರಾನ್ ವಿರುದ್ಧ; ಶುಕ್ರವಾರ ಜಪಾನ್ ವಿರುದ್ಧ ಸೆಣಸಲಿದೆ. ಎರಡು ಗುಂಪುಗಳ ಅಗ್ರ ಎರಡು ತಂಡಗಳು ಸೆಮಿಫೈನಲ್ಗೆ ಮುನ್ನಡೆಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.