ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ ಫೈನಲ್‌ಗೆ ಪ್ರಣಯ್

ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌: ಶ್ರೀಕಾಂತ್‌ಗೆ ಸೋಲು
Last Updated 1 ಸೆಪ್ಟೆಂಬರ್ 2022, 11:33 IST
ಅಕ್ಷರ ಗಾತ್ರ

ಒಸಾಕ: ಭಾರತದ ಎಚ್‌.ಎಸ್‌.ಪ್ರಣಯ್‌ ಅವರು ಜಪಾನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು. ಆದರೆ ಕೆ.ಶ್ರೀಕಾಂತ್‌ ಅವರ ಸವಾಲು ಕೊನೆಗೊಂಡಿತು.

ಗುರುವಾರ ನಡೆದ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯದಲ್ಲಿ ಪ್ರಣಯ್‌ 22-20 21-19 ರಲ್ಲಿ ಮಾಜಿ ವಿಶ್ವ ಚಾಂಪಿಯನ್‌ ಸಿಂಗಪುರದ ಲೊ ಕೀನ್ ಯೆವ್‌ ಅವರನ್ನು ಮಣಿಸಿದರು. ಪ್ರಣಯ್‌ ಅವರು ಲೊ ಕೀನ್‌ ಜತೆ ಒಟ್ಟು ನಾಲ್ಕು ಸಲ ಪೈಪೋಟಿ ನಡೆಸಿದ್ದು, ಮೂರರಲ್ಲಿ ಗೆಲುವು ಪಡೆದಿದ್ದಾರೆ.

30 ವರ್ಷದ ಪ್ರಣಯ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಚೀನಾ ತೈಪೆಯ ಚೌ ತಿಯೆನ್ ಚೆನ್‌ ಅವರನ್ನು ಎದುರಿಸುವರು.

ಶ್ರೀಕಾಂತ್‌ಗೆ ನಿರಾಸೆ: ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಕಣದಲ್ಲಿದ್ದ ಭಾರತದ ಇನ್ನೊಬ್ಬ ಆಟಗಾರ ಶ್ರೀಕಾಂತ್‌ 10–21, 16–21 ರಲ್ಲಿ ಸ್ಥಳೀಯ ಆಟಗಾರ ಕಾಂಟ ಸುನೆಯಮ ಎದುರು ಪರಾಭವಗೊಂಡರು.

ಶ್ರೀಕಾಂತ್‌ ಬುಧವಾರ ನಡೆದ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವದ ಐದನೇ ರ‍್ಯಾಂಕ್‌ನ ಆಟಗಾರ ಮಲೇಷ್ಯಾದ ಲೀ ಜಿ ಜಿಯಾ ಅವರಿಗೆ ಆಘಾತ ನೀಡಿದ್ದರು. ಸುನೆಯಮ ಎದುರು ಅವರು ಅದೇ ಲಯದಲ್ಲಿ ಆಡಲು ವಿಫಲರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT