ಮಸ್ಕತ್: ಹಾಲಿ ಚಾಂಪಿಯನ್ ಭಾರತ ತಂಡವು ಇಲ್ಲಿ ನಡೆಯುತ್ತಿರುವ ಪುರುಷರ ಜೂನಿಯರ್ ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿದೆ.

ಮಾಜಿ ಅಂತರರಾಷ್ಟ್ರೀಯ ಗೋಲ್ಕೀಪರ್ ಪಿ.ಆರ್.ಶ್ರೀಜೇಶ್ ಅವರ ತರಬೇತಿಯಲ್ಲಿರುವ ಭಾರತ ತಂಡವು ಗುರುವಾರ ನಡೆದ ‘ಎ’ ಗುಂಪಿನ ಎರಡನೇ ಪಂದ್ಯದ ರೋಚಕ ಹಣಾಹಣಿಯಲ್ಲಿ 3–2 ಗೋಲುಗಳಿಂದ ಜಪಾನ್ ತಂಡವನ್ನು ಮಣಿಸಿತು. ಮೊದಲ ಪಂದ್ಯದಲ್ಲಿ 11–0ಯಿಂದ ಥಾಯ್ಲೆಂಡ್ ತಂಡವನ್ನು ಹಿಮ್ಮೆಟ್ಟಿಸಿ ಶುಭಾರಂಭ ಮಾಡಿತ್ತು.

ಭಾರತದ ಪರ ಥಾಕ್ಚೋಮ್ ಕಿಂಗ್ಸನ್ ಸಿಂಗ್ (12ನೇ ನಿಮಿಷ), ರೋಹಿತ್ (36ನೇ) ಮತ್ತು ಅರೈಜೀತ್ ಸಿಂಗ್ ಹುಂಡಾಲ್ (39ನೇ ನಿ) ಗೋಲು ಗಳಿಸಿದರೆ, ಜಪಾನ್ ಪರ ನಿಯೋ ಸಾಟೊ (15ನೇ ಮತ್ತು 38ನೇ) ಎರಡು ಬಾರಿ ಚೆಂಡನ್ನು ಗುರಿ ಸೇರಿಸಿದರು.

ಅಮಿರ್ ಅಲಿ ನಾಯಕತ್ವದ ಭಾರತ ತಂಡವು ಶನಿವಾರ ಚೀನಾ ತೈಪೆ ತಂಡದ ಸವಾಲನ್ನು ಎದುರಿಸಲಿದೆ. ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಡಿಸೆಂಬರ್ 1ರಂದು ಕೊರಿಯಾ ತಂಡದೊಂದಿಗೆ ಮುಖಾಮುಖಿಯಾಗಲಿದೆ.

ಕಳೆದ ಬಾರಿ ಫೈನಲ್ನಲ್ಲಿ ಭಾರತವು 2–1 ಗೋಲುಗಳಿಂದ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.