ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ವಿರುದ್ಧ ಹಾಕಿ ಸರಣಿ: ಮುಂದುವರಿದ ನಿರಾಸೆ

Published 12 ಏಪ್ರಿಲ್ 2024, 12:53 IST
Last Updated 12 ಏಪ್ರಿಲ್ 2024, 12:53 IST
ಅಕ್ಷರ ಗಾತ್ರ

ಪರ್ತ್‌: ಒಲಿಂಪಿಕ್ಸ್‌ ಸಿದ್ಧತೆಯ ಭಾಗವಾಗಿ ಆಸ್ಟ್ರೆಲಿಯಾ ಪ್ರವಾಸದಲ್ಲಿರುವ ಭಾರತ ಪುರುಷರ ಹಾಕಿ ತಂಡ ನಿರಾಶಾದಾಯಕ ಪ್ರದರ್ಶನ ಮುಂದುವರಿಸಿದೆ. ಶುಕ್ರವಾರ ನಡೆದ ನಾಲ್ಕನೇ ಹಾಕಿ ಟೆಸ್ಟ್‌  ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ 3–1 ಗೋಲುಗಳಿಂದ ಭಾರತ ತಂಡವನ್ನು ಸೋಲಿಸಿತು.

ಭಾರತದ ಪ್ರದರ್ಶನ ಈ ಹಿಂದಿನ ಪಂದ್ಯಕ್ಕಿಂತ ಸ್ವಲ್ಪ ಸುಧಾರಿಸಿದ್ದರೂ, ಬಲಿಷ್ಠ ಆಸ್ಟ್ರೇಲಿಯಾ ಎದುರು ಗೆಲ್ಲಲು ಆಗಲಿಲ್ಲ. ಆಸ್ಟ್ರೇಲಿಯಾ ಸರಣಿಯಲ್ಲಿ 4–0 ಮುನ್ನಡೆ ಪಡೆಯಿತು.

ಗುಡುಗು– ಮಿಂಚಿನಿಂದ 40 ನಿಮಿಷ ತಡವಾಗಿ ಆರಂಭವಾದ ಈ ಪಂದ್ಯದ ನಾಲ್ಕೂ ಗೋಲುಗಳು ಪೆನಾಲ್ಟಿ ಕಾರ್ನರ್‌ಗಳ ಮೂಲಕ ಬಂದವು.

ಭಾರತ 12ನೇ ನಿಮಿಷ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಮೂಲಕ ಮುನ್ನಡೆ ಪಡೆಯಿತು. ಆದರೆ ಆಸ್ಟ್ರೇಲಿಯಾ ಜೆರೆಮಿ ಹೇವಾರ್ಡ್ಸ್‌ (19 ಮತ್ತು 47ನೇ ನಿಮಿಷ) ಅವರ ಮೂಲಕ ಮುನ್ನಡೆ ಸಾಧಿಸಿತು. ಜಾಕ್‌ ವೆಲ್ಚ್‌ ಅವರು 54ನೇ ನಿಮಿಷ ಆತಿಥೇಯರ ವಿಜಯದ ಅಂತರವನ್ನು ಹಿಗ್ಗಿಸಿದರು.

ಮೊದಲ ಪಂದ್ಯವನ್ನು 1–5 ರಿಂದ ಸೋತಿದ್ದ ಭಾರತ ನಂತರದ ಎರಡು ಟೆಸ್ಟ್‌ಗಳನ್ನು ಕ್ರಮವಾಗಿ 2–4 ಮತ್ತು 1–2 ರಿಂದ ಸೋತಿತ್ತು.

ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್‌ ಶನಿವಾರ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT