ಬೆಂಗಳೂರು: ಭಾರತದ ಪೂಜಾ ಮತ್ತು ಸಿದ್ಧಾರ್ಥ ಚೌಧರಿ ಅವರು ಚೆನ್ನೈನಲ್ಲಿ ನಡೆಯುತ್ತಿರುವ ದಕ್ಷಿಣ ಏಷ್ಯಾ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಮಹಿಳೆಯರ ಹೈಜಂಪ್ ಮತ್ತು ಪುರುಷರ ಷಾಟ್‌ಪಟ್‌ನಲ್ಲಿ ಕೂಟ ದಾಖಲೆ ಬರೆದರು.
ಬುಧವಾರ ನಡೆದ ಸ್ಪರ್ಧೆಯಲ್ಲಿ ಪೂಜಾ 1.80 ಮೀ. ಎತ್ತರ ಜಿಗಿದು (ಹಿಂದಿನ ದಾಖಲೆ 1.75 ಮೀ.) ಚಾಂಪಿಯನ್ ಆದರು. ಸಿದ್ಧಾರ್ಥ್ 19.19 ಮೀ. ಸಾಧನೆಯೊಂದಿಗೆ (ಹಿಂದಿನ ದಾಖಲೆ 18.53 ಮೀ) ಚಿನ್ನಕ್ಕೆ ಕೊರಳೊಡ್ಡಿದರು.
ಭಾರತ ತಂಡದಲ್ಲಿರುವ ಕರ್ನಾಟಕದ ಸುಧೀಕ್ಷಾ ಮಹಿಳೆಯರ 100 ಮೀಟರ್ ಓಟದಲ್ಲಿ (11.92ಸೆ) ಬೆಳ್ಳಿ ಗೆದ್ದರೆ, ಬೋಪಣ್ಣ ಕ್ಲಾಪ್ಪ ಪುರುಷರ 800 ಮೀಟರ್ ಓಟದಲ್ಲಿ (1ನಿ.50.45ಸೆ) ಕಂಚಿನ ಪದಕ ಗೆದ್ದರು.