ಬೆಂಗಳೂರು: ಭಾರತವು 2029 ಮತ್ತು 2031ರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗಳ ಆತಿಥ್ಯದ ಹಕ್ಕು ಪಡೆಯಲು ಬಿಡ್ ಸಲ್ಲಿಸಲು ಸಿದ್ಧತೆ ನಡೆಸಿದೆ ಎಂದು ಭಾರತ ಅಥ್ಲೆಟಿಕ್ಸ್ ಫೆಡರೇಷನ್ (ಎಎಫ್ಐ) ವಕ್ತಾರ ಅದಿಲ್ ಸುಮರಿವಾಲಾ ಹೇಳಿದ್ದಾರೆ.

2029 ಮತ್ತು 2031ರ ಕೂಟಗಳ ಆತಿಥ್ಯಕ್ಕಾಗಿ ಬಿಡ್ ಸಲ್ಲಿಸುವ ಪ್ರಕ್ರಿಯೆ ಇದೇ ವರ್ಷ ಆರಂಭವಾಗಲಿದೆ. ಬಿಡ್ ಸಲ್ಲಿಗೆ ಇದೇ ಅಕ್ಟೋಬರ್ 1 ಕೊನೆಯ ದಿನವಾಗಿದೆ. ಮುಂದಿನ ವರ್ಷದ ಸೆಪ್ಟೆಂಬರ್ನಲ್ಲಿ ಆಯೋಜನೆಯ ಹಕ್ಕು ಪಡೆದ ದೇಶಗಳನ್ನು ವಿಶ್ವ ಅಥ್ಲೆಟಿಕ್ಸ್ (ಡಬ್ಲ್ಯುಎ) ಪ್ರಕಟಿಸಲಿದೆ.

‘ನಾವು ಈ ಎರಡೂ ವರ್ಷಗಳ ಕೂಟಕ್ಕಾಗಿ ಬಿಡ್ ಸಲ್ಲಿಸಲಿದ್ದೇವೆ. ಎರಡೂ ಕೂಟಗಳ ಆಯೋಜನೆ ಅಥವಾ ಯಾವುದಾದರೂ ಒಂದನ್ನು ಕೊಟ್ಟರೂ ಸಾಕು’ ಎಂದು ಶನಿವಾರ ಹೇಳಿದರು.

ಎಎಫ್ಐ ಉಪಾಧ್ಯಕ್ಷರೂ ಆಗಿರುವ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ನೀರಜ್ ಚೋಪ್ರಾ ಕ್ಲಾಸಿಕ್ ಅಂತರರಾಷ್ಟ್ರೀಯ ಜಾವೆಲಿನ್ ಥ್ರೋ ಕೂಟವನ್ನು ವೀಕ್ಷಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘2028ರ ಜೂನಿಯರ್ ವಿಶ್ವ ಚಾಂಪಿಯನ್ಷಿಪ್ ಆತಿಥ್ಯಕ್ಕಾಗಿ ನಾವು ಈಗಾಗಲೇ ಬಿಡ್ ಸಲ್ಲಿಸಿದ್ದೇವೆ’ ಎಂದೂ ಸ್ಪಷ್ಟಪಡಿಸಿದರು.

‘ ವಿಶ್ವ ಅಥ್ಲೆಟಿಕ್ಸ್ ರಿಲೆ ಕೂಟದ ಆಯೋಜನೆಗೂ ಬಿಡ್ ಸಲ್ಲಿಸುತ್ತಿದ್ದೇವೆ. ಮುಂಬರುವ ಎರಡು ಕೂಟಗಳ ಆಯೋಜನೆ ಮಾಡುವ ದೇಶಗಳ ಹೆಸರುಗಳನ್ನು ಪ್ರಕಟಿಸಲಾಗಿದೆ. ಅದರ ನಂತರದ ಕೂಟವನ್ನು ಪಡೆಯಲು ನಾವು ಉತ್ಸುಕರಾಗಿದ್ದೇವೆ’ ಎಂದು ಹೇಳಿದರು.

ಬೋತ್ಸವಾನಾ ಮತ್ತು ಬಹಮಾಸ್ ದೇಶಗಳು ಕ್ರಮವಾಗಿ 2026 ಹಾಗೂ 2028ರ ವಿಶ್ವ ರಿಲೆ ಕೂಟಗಳನ್ನು ಆಯೋಜಿಸಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.