ಚಾಂಗ್ವಾನ್ (ದಕ್ಷಿಣ ಕೊರಿಯಾ): ಅರ್ಜುನ್ ಬಬೂತಾ, ತುಷಾರ್ ಮಾನೆ ಹಾಗೂ ಪಾರ್ಥ್ ಮಖಿಜಾ ಅವರನ್ನೊಳಗೊಂಡ ಭಾರತದ ಪುರುಷರ ತಂಡ ದಕ್ಷಿಣ ಕೊರಿಯಾದ ಚಾಂಗ್ವಾನ್ನಲ್ಲಿ ನಡೆಯುತ್ತಿರುವ ಅಂತರರಾಷ್ಟ್ರೀಯ ಶೂಟಿಂಗ್ ಸ್ಪೋರ್ಟ್ ಫೆಡರೇಷನ್ (ಐಎಸ್ಎಸ್ಎಫ್) ವಿಶ್ವಕಪ್ನಲ್ಲಿ ಚಿನ್ನ ಗೆದ್ದಿದೆ.

ಏರ್ ರೈಫಲ್ ತಂಡ ವಿಭಾಗದ ಅಂತಿಮ ಹಣಾಹಣಿಯಲ್ಲಿ ಆತಿಥೇಯ ಕೊರಿಯಾದ ಸಿಯೌಂಘೋ ಬಾಂಗ್, ಸ್ಯಾಂಗ್ಡೊ ಕಿಮ್ ಮತ್ತು ಹಾಜುನ್ ಪಾರ್ಕ್ ವಿರುದ್ಧ ಭಾರತದ ತಂಡ 17–15 ಅಂತರಿಂದ ಗೆಲುವು ಸಾಧಿಸಿದೆ.

ಏರ್ ರೈಫಲ್ ಮಹಿಳೆಯರ ತಂಡ ವಿಭಾಗದಲ್ಲಿ ಭಾರತ ಬೆಳ್ಳಿ ಸಾಧನೆ ಮಾಡಿದೆ. ಆತಿಥೇಯ ತಂಡದ ಶೂಟರ್ಗಳಾದ ಜಿಹೈಯೊನ್ ಕಿಯುಮ್, ಇಯುನ್ಸಿಯೊ ಲೀ ಮತ್ತು ಡಯಿಯೊಂಗ್ ಗ್ವೋನ್, ಭಾರತದ ಎಲವೆನಿಲ್ ವಲರಿವಾನ್, ಮೆಹುಲಿ ಘೋಷ್ ಮತ್ತು ರಮಿತಾ ಎದುರು 16–10 ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಈವರೆಗೆ ಮೂರು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಒಂದು ಕಂಚು ಸಹಿತ ಒಟ್ಟು ಎಂಟು ಪದಕ ಗೆದ್ದಿರುವ ಭಾರತ, ಪದಕ ಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.