ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಕಿ: ಸ್ಪೇನ್ ವಿರುದ್ಧ ಭಾರತಕ್ಕೆ ಜಯ

ಪೆನಾಲ್ಟಿ ಶೂಟೌಟ್‌ನಲ್ಲಿ ಗೆಲುವು
Published 19 ಫೆಬ್ರುವರಿ 2024, 20:17 IST
Last Updated 19 ಫೆಬ್ರುವರಿ 2024, 20:17 IST
ಅಕ್ಷರ ಗಾತ್ರ

ಭುವನೇಶ್ವರ : ಅನುಭವಿ ಗೋಲ್‌ಕೀಪರ್ ಪಿ.ಆರ್.ಶ್ರೀಜೇಶ್ ಅವರ ರಕ್ಷಣೆಯ ಆಟದಿಂದ ಭಾರತ ಪುರುಷರ ಹಾಕಿ ತಂಡ ಪ್ರೋ ಲೀಗ್ ಪಂದ್ಯದಲ್ಲಿ ಸ್ಪೇನ್ ತಂಡವನ್ನು ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲಿಸಿತು. ನಿಗದಿ ಅವಧಿಯ ಆಟ ಮುಗಿದಾಗ ಸ್ಕೋರ್ 2–2ರಲ್ಲಿ ಸಮನವಾಗಿತ್ತು. 

ಭಾರತ ಪರ ಜರ್ಮನ್‌ಪ್ರೀತ್ ಸಿಂಗ್ (1ನೇ ನಿಮಿಷ), ಅಭಿಷೇಕ್ (35ನೇ ನಿಮಿಷ) ಗೋಲು ಗಳಿಸಿದರೆ,  ಸ್ಪೇನ್ ಪರ ಜೋಸ್ ಬಾಸ್ಟೆರಾ (3ನೇ ನಿಮಿಷ) ಮತ್ತು ಬೊರ್ಜಾ ಲಕಾಲೆ (15ನೇ ನಿಮಿಷ) ಗೋಲು ಗಳಿಸಿದರು.

ಪೆನಾಲ್ಟಿ ಶೂಟೌಟ್‌ನಲ್ಲೂ ಎರಡು ತಂಡಗಳು 7–7 ಗೋಲು ಗಳಿಸಿದವು. ಇದರಿಂದ ಪಂದ್ಯವು ರೋಚಕವಾಗಿತ್ತು. ಲಲಿತ್ ಉಪಾಧ್ಯಾಯ ಗೋಲು ಹೊಡೆದರೆ, ಮಾರ್ಕ್ ಮಿರಾಲೆಸ್ ಪ್ರಯತ್ನವನ್ನು ಶ್ರೀಜೇಶ್ ತಡೆದರು. ಭಾರತ ಬುಧವಾರ ನೆದರ್ಲೆಂಡ್ಸ್ ತಂಡವನ್ನು ಎದುರಿಸಲಿದೆ.    

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT