ಟೋಕಿಯೊ: ಭಾರತದ ಸೇಲಿಂಗ್ ಪಟುಗಳ ತಂಡವು ಮಂಗಳವಾರ ಟೋಕಿಯೊಗೆ ಕಾಲಿಟ್ಟಿತು. ಇದರೊಂದಿಗೆ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳಲು ತೆರಳಿದ ದೇಶದ ಮೊದಲ ತಂಡ ಎನಿಸಿಕೊಂಡಿತು.

ಕರ್ನಾಟಕದ ಗಣಪತಿ ಚೆಂಗಪ್ಪ, ವರುಣ್ ಥಕ್ಕರ್, ವಿಷ್ಣು ಸರವಣನ್ ಮತ್ತು ನೇತ್ರಾ ಕುಮನನ್ ಮತ್ತು ಕೋಚ್ಗಳನ್ನೊಳಗೊಂಡ ತಂಡವು ಹನೆಡಾ ವಿಮಾನ ನಿಲ್ದಾಣ ತಲುಪಿದೆ.

ಇದೇ 23ರಂದು ಒಲಿಂಪಿಕ್ಸ್ ಆರಂಭವಾಗಲಿದ್ದು, 25ರಿಂದ ಸೇಲಿಂಗ್ ಸ್ಪರ್ಧೆಗಳು ನಡೆಯಲಿವೆ.

ಟೋಕಿಯೊಗೆ ತೆರಳುವ ಮೊದಲು ಸೇಲಿಂಗ್ ಪಟುಗಳು, ಸರ್ಕಾರದ ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆಯಡಿ (ಟಾಪ್ಸ್) ಯೂರೋಪ್ನ ವಿವಿಧ ದೇಶಗಳಲ್ಲಿ ತರಬೇತಿ ಪಡೆದಿದ್ದಾರೆ. ನೇತ್ರಾ ಅವರು ಸ್ಪೇನ್ನಲ್ಲಿ, ಥಕ್ಕರ್ ಹಾಗೂ ಗಣಪತಿ ಜೋಡಿಯು ಪೋರ್ಚುಗಲ್ನಲ್ಲಿ ತರಬೇತಿ ಪಡೆದರೆ, ಸರವಣನ್ ಮಾಲ್ಟಾದಲ್ಲಿ ಸಿದ್ಧತೆ ನಡೆಸಿದ್ದರು.

ಇವರೆಲ್ಲರೂ ಯೂರೋಪ್ನ ರಾಷ್ಟ್ರಗಳಿಂದ ನೇರವಾಗಿ ಟೋಕಿಯೊಗೆ ತೆರಳಿರುವುದರಿಂದ, ಭಾರತದಿಂದ ಬರುವವರು ಎದುರಿಸುವ ಕಠಿಣ ಕೋವಿಡ್ ನಿಯಮಗಳು ಇವರಿಗೆ ಅನ್ವಯಿಸುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.