ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌: ಭಾರತಕ್ಕೆ ಮತ್ತೆರಡು ಚಿನ್ನ

Published 7 ಜೂನ್ 2023, 6:50 IST
Last Updated 7 ಜೂನ್ 2023, 6:50 IST
ಅಕ್ಷರ ಗಾತ್ರ

ಜೂಲ್‌, ಜರ್ಮನಿ: ಭಾರತದ ಶೂಟರ್‌ಗಳು ಇಲ್ಲಿ ನಡೆಯುತ್ತಿರುವ ಐಎಸ್ಎಸ್‌ಎಫ್‌ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ಮತ್ತೆರಡು ಚಿನ್ನದ ಪದಕ ಗೆದ್ದುಕೊಂಡರು.

ಪುರುಷರ 25 ಮೀ. ಪಿಸ್ತೂಲ್‌ ಶೂಟಿಂಗ್‌ನಲ್ಲಿ ಅಮನ್‌ಪ್ರೀತ್‌ ಸಿಂಗ್‌ ಅವರು 586 ಪಾಯಿಂಟ್ಸ್‌ಗಳೊಂದಿಗೆ ಅಗ್ರಸ್ಥಾನ ಪಡೆದರೆ, ಮಹಿಳೆಯರ 25 ಮೀ. ತಂಡ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಲಭಿಸಿತು.

ಮೇಘನಾ ಸದುಲಾ, ಪಾಯಲ್‌ ಖತ್ರಿ ಮತ್ತು ಸಿಮ್ರನ್‌ಪ್ರೀತ್‌ ಕೌರ್‌ ಬ್ರಾರ್‌ ಅವರನ್ನೊಳಗೊಂಡ ಮಹಿಳಾ ತಂಡ 1,179 ಪಾಯಿಂಟ್ಸ್‌ಗಳನ್ನು ಕಲೆಹಾಕಿ ಮೊದಲ ಸ್ಥಾನ ಗಳಿಸಿತು.

ಭಾರತ ತಂಡವು ಐದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ. ಚಾಂಪಿಯನ್‌ಷಿಪ್‌ನಲ್ಲಿ ಇನ್ನು ಎರಡು ದಿನಗಳ ಸ್ಪರ್ಧೆಗಳು ಬಾಕಿಯಿವೆ.

ಮಹಿಳೆಯರ ವೈಯಕ್ತಿಕ ವಿಭಾಗದಲ್ಲಿ ಮೇಘನಾ, ಪಾಯಲ್‌ ಮತ್ತು ದಿವ್ಯಾಂಶಿ ಅವರು ಫೈನಲ್‌ ಸುತ್ತು ತಲುಪಿದರೂ, ಪದಕ ಗೆಲ್ಲಲು ಆಗಲಿಲ್ಲ. 22 ಪಾಯಿಂಟ್ಸ್‌ಗಳೊಂದಿಗೆ ಮೇಘನಾ 4ನೇ ಸ್ಥಾನ ಪಡೆದರು. ಪಾಯಲ್‌ (18) ಮತ್ತು ದಿವ್ಯಾಂಶಿ (11) ಅವರು ಕ್ರಮವಾಗಿ ಐದು ಹಾಗೂ ಏಳನೇ ಸ್ಥಾನದಲ್ಲಿ ಕಾಣಿಸಿಕೊಂಡರು.

ಪುರುಷರ 50 ಮೀ. ರೈಫಲ್‌ ತ್ರಿ ಪೊಸಿಷನ್ಸ್‌ನಲ್ಲಿ ಅವಿನಾಶ್‌ ಯಾದವ್‌ 28ನೇ ಸ್ಥಾನ, ಪರೀಕ್ಷಿತ್‌ ಸಿಂಗ್ 31 ಮತ್ತು ರಮಣ್ಯ ತೋಮರ್‌ 40ನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT