ನವದೆಹಲಿ: ಭಾರತದ ಪ್ಯಾರಾ ಪವರ್ಲಿಫ್ಟಿಂಗ್ ತಂಡವು ಇದೇ 17 ರಿಂದ 25ರವರೆಗೆ ಚೀನಾದ ಬೀಜಿಂಗ್ನಲ್ಲಿ ನಡೆಯಲಿರುವ ಪ್ಯಾರಾ ಪವರ್ಲಿಫ್ಟಿಂಗ್ ವಿಶ್ವಕಪ್ ಸ್ಪರ್ಧೆಯಲ್ಲಿ ಕಣಕ್ಕಿಳಿಯಲಿದೆ.

16 ಸ್ಪರ್ಧಿಗಳ ತಂಡವು ಚೀನಾಕ್ಕೆ ತೆರಳಿದೆ. ಇದರಲ್ಲಿ ಏಳು ಮಂದಿ ಮಹಿಳೆಯರಿದ್ಧಾರೆ. ಅದರಲ್ಲಿ ಝೈನಾಬ್ ಖಾತುನ್, ಸೀಮಾ ರಾಣಿ, ಝಂಡು ಕುಮಾರ್, ಜಾಬಿ ಮ್ಯಾಥ್ಯೂ, ಮನೀಷ್ ಕುಮಾರ್ ಮತ್ತು ಕಸ್ತೂರಿ ಅವರಿದ್ದಾರೆ. ಭಾನುವಾರ ನಡೆದ ಸಮಾರಂಭದಲ್ಲಿ ತಂಡಕ್ಕೆ ಬೀಳ್ಕೊಡುಗೆ ನೀಡಲಾಯಿತು. ಪ್ಯಾರಾಲಿಂಪಿಯನ್ ಅಥ್ಲೀಟ್ ದೀಪಾ ಮಲಿಕ್, ಪಿಸಿಐ ಮಹಾಪ್ರಧಾನ ಕಾರ್ಯದರ್ಶಿ ಜಯವಂತ್ ಹಮಣ್ಣವರ್ ಮತ್ತು ಭಾರತ ಪ್ಯಾರಾ ಪವರ್ಲಿಫ್ಟಿಂಗ್ ಚೇರ್ಮನ್ ಜೆ.ಪಿ. ಸಿಂಗ್ ಹಾಜರಿದ್ದರು.

ಡಿಪಿಎಲ್ನಲ್ಲಿ ತಂಡಗಳ ಹೆಚ್ಚಳ: ಇಂಗಿತ

ನವದೆಹಲಿ: ಮುಂಬರುವ ಡೆಲ್ಲಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಎರಡನೇ ಆವೃತ್ತಿಯಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಮೊದಲ ಆವೃತ್ತಿಯಲ್ಲಿ ಆರು ತಂಡಗಳು ಆಡಿದ್ದವು. ಈ ಅವೃತ್ತಿಗೆ ಇನ್ನೂ ಎರಡು ತಂಡಗಳನ್ನು ಸೇರ್ಪಡೆ ಮಾಡಲು ಯೋಜಿಸಲಾಗಿದೆ ಎಂದು ದ ಡಲ್ಲಿ ಮತ್ತು ಡಿಸ್ಟ್ರಿಕ್ಟ್ಸ್ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ನಿರ್ದೇಶಕ ಶ್ಯಾಮ್ ಸುಂದರ್ ಶರ್ಮಾ ಹೇಳಿದ್ದಾರೆ.

‘ಡಿಪಿಎಲ್ನಲ್ಲಿ ತಂಡಗಳಿಗೆ ಸೌಲಭ್ಯಗಳನ್ನು ಹೆಚ್ಚಿಸುವತ್ತ ಯೋಜಿಸುತ್ತಿದ್ದೇವೆ. ಇದೇ ಹೊತ್ತಿನಲ್ಲಿ ತಂಡಗಳ ಸಂಖ್ಯೆಯನ್ನೂ ಹೆಚ್ಚಳ ಮಾಡುವ ಕುರಿತು ಮಾತುಕತೆ ನಡೆಯುತ್ತಿದೆ’ ಎಂದು ಶರ್ಮಾ ತಿಳಿಸಿದರು.

ಲಂಕಾ ತಂಡಕ್ಕೆ ಡಿಸಿಲ್ವಾ ನಾಯಕ

ಕೊಲಂಬೊ: ಶ್ರೀಲಂಕಾ ತಂಡಕ್ಕೆ ಧನಂಜಯ್ ಡಿಸಿಲ್ವಾ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದೆ. ಮಂಗಳವಾರ ಆರಂಭವಾಗಲಿರುವ ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಯಲ್ಲಿ ಡಿಸಿಲ್ವಾ ನಾಯಕತ್ವದಲ್ಲಿ 18 ಜನರ ತಂಡ ಕಣಕ್ಕಿಳಿಯಲಿದೆ.

ಕುಶಾಲ ಮೆಂಡಿಸ್, ಕಮಿಂದು ಮೆಂಡಿಸ್, ಪ್ರಭಾತ್ ಜಯಸೂರ್ಯ, ದಿನೇಶ್ ಚಾಂಡಿಮಲ್ ಮತ್ತು ಏಂಜೆಲೊ ಮ್ಯಾಥ್ಯೂಸ್ ಅವರು ಸ್ಥಾನ ಪಡೆದಿದ್ದಾರೆ. ಈ ಸರಣಿಯಲ್ಲಿ ಉಭಯ ತಂಡಗಳು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿವೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.