ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಕಿ: ಮಹಿಳಾ ತಂಡಕ್ಕೆ ಹ್ಯಾಟ್ರಿಕ್ ಸೋಲು

Published 25 ಮೇ 2024, 16:08 IST
Last Updated 25 ಮೇ 2024, 16:08 IST
ಅಕ್ಷರ ಗಾತ್ರ

ಆ್ಯಂಟ್‌ವೆ್‌ಪ್ (ಬೆಲ್ಜಿಯಮ್): ಭಾರತ ವನಿತೆಯರ ತಂಡ, ಎಫ್‌ಐಎಚ್‌ ಪ್ರೊ ಲೀಗ್ ಹಾಕಿ ಯುರೋಪ್‌ ಲೆಗ್‌ನ ಸತತ ಮೂರನೇ ಪಂದ್ಯದಲ್ಲೂ ಸೋಲು ಅನುಭವಿಸಿತು. ಶನಿವಾರ ನಡೆದ ಪಂದ್ಯದಲ್ಲಿ ಭಾರತ 1–2 ಗೋಲುಗಳಿಂದ ಅತಿಥೇಯ ಬೆಲ್ಜಿಯಮ್‌ಗೆ ಮಣಿಯಿತು.

ಕೋಚ್ ಆಗಿ ಹರೇಂದ್ರ ಸಿಂಗ್ ಅವರಿಗೆ ಇದು ಮೊದಲ ಪ್ರವಾಸ.  ಭಾರತ ತಂಡ ಪ್ರವಾಸ ಮೊದಲ ಪಂದ್ಯದಲ್ಲಿ 0–5  ಗೋಲುಗಳಿಂದ ಅರ್ಜೇಂಟೀನಾ ತಂಡಕ್ಕೆ ಮಣಿದಿತ್ತು. 

ಬೆಲ್ಜಿಯಮ್ ಪರ ಬ್ಯಾಲೆಂಘಿಯೆನ್ ಅಂಬ್ರೆ (14ನೇ ನಿಮಿಷ) ಹಾಗೂ ಬ್ಲಾಕ್ಮನ್ಸ್ ವನೆಸ್ಸಾ (20ನೇ ನಿಮಿಷ) ಗಳಿಸಿದ ಗೋಲುಗಳ ನೆರವಿನಿಂದ ಬೆಲ್ಜಿಯಂ 2-0 ಮುನ್ನಡೆ ಸಾಧಿಸಿತು. ಎರಡೂ ಗೋಲುಗಳು ಪೆನಾಲ್ಟಿ ಕಾರ್ನರ್‌ಗಳಿಂದ ಬಂದವು.

ಭಾರತದ ಪರ ಕುಮಾರಿ ಸಂಗೀತಾ 34ನೇ ನಿಮಿಷದಲ್ಲಿ ಗೋಲ್ ಬಾರಿಸಿದರು.  

ಇದು ಎಲ್ಲಾ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬೆಲ್ಜಿಯಮ್‌ ವಿರುದ್ಧ ಭಾರತ ಮಹಿಳಾ ತಂಡದ ಏಳನೇ ಸೋಲು.

ಭಾರತ ಭಾನುವಾರ ಅರ್ಜೆಂಟೀನಾ ವಿರುದ್ಧ ಸೆಣಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT