ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾರ್ದಿಕ್‌, ಸವಿತಾಗೆ ಎಫ್‌ಐಎಚ್‌ ಪ್ರಶಸ್ತಿ

ಸತತ ಮೂರನೇ ಸಲ ವರ್ಷದ ಗೋಲ್‌ಕೀಪರ್ ಆದ ಸವಿತಾ
Published 19 ಡಿಸೆಂಬರ್ 2023, 15:18 IST
Last Updated 19 ಡಿಸೆಂಬರ್ 2023, 15:18 IST
ಅಕ್ಷರ ಗಾತ್ರ

ಲುಸಾನ್ (ಸ್ವಿಜರ್ಲೆಂಡ್‌): ಭಾರತ ಹಾಕಿ ತಂಡದ ಮಿಡ್‌ ಫೀಲ್ಡರ್‌ ಹಾರ್ದಿಕ್ ಸಿಂಗ್ ಮತ್ತು ಮಹಿಳಾ ತಂಡದ ನಾಯಕಿ ಸವಿತಾ ಅವರು ಮಂಗಳವಾರ ಕ್ರಮವಾಗಿ ಎಫ್‌ಐಎಚ್‌  ವರ್ಷದ ಆಟಗಾರ ಮತ್ತು ವರ್ಷದ ಗೋಲ್‌ ಕೀಪರ್‌ (ಮಹಿಳಾ) ಪ್ರಶಸ್ತಿಗೆ ಭಾಜನರಾದರು.

ತಜ್ಞರ ಸಮಿತಿ, ರಾಷ್ಟ್ರೀಯ ಫೆಡರೇಷನ್‌ಗಳ ಮತಗಳ ನಂತರ ಪ್ರಶಸ್ತಿ ಪ್ರಕಟಿಸಲಾಯಿತು. ರಾಷ್ಟ್ರೀಯ ಫೆಡರೇಷನ್‌ಗಳನ್ನು ಆಯಾ ರಾಷ್ಟ್ರೀಯ ತಂಡಗಳ ನಾಯಕರು, ತರಬೇತುದಾರರು ಮತ್ತು ಮಾಧ್ಯಮದವರು ಪ್ರತಿನಿಧಿಸಿದ್ದರು.

ರಾಷ್ಟ್ರೀಯ ತಂಡದ ಪರ 114 ಪಂದ್ಯಗಳನ್ನು ಆಡಿರುವ ಹಾರ್ದಿಕ್, 2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ತಂಡ ಕಂಚಿನ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನಂತರದ ದಿನಗಳಲ್ಲಿ ಅವರ ಸುಧಾರಿತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ.

ಇದು ಹಾರ್ದಿಕ್ ಅವರಿಗೆ ಎರಡನೇ ಪ್ರಶಸ್ತಿ.  ಇದಕ್ಕೆ ಮೊದಲು ಅವರು ಹಾಕಿ ಇಂಡಿಯಾದ 2022ರ ವರ್ಷದ ಆಟಗಾರ ಎನಿಸಿ ಬಲಬೀರ್ ಸಿಂಗ್‌ ಸೀನಿಯರ್ ಪ್ರಶಸ್ತಿ ಗೆದ್ದಿದ್ದರು.

‘ಒಂದು ಉತ್ತಮ ತಂಡ ಹೊಂದಿದ್ದಾಗ, ಅದು ನಮ್ಮನ್ನು ಉತ್ತಮ ಆಟಗಾರನಾಗಿ ರೂಪಿಸುತ್ತದೆ. ನಮ್ಮ ಕೆಲಸ ಸುಲಭವಾಗುತ್ತದೆ. ಈ ಹಂತಕ್ಕೆ ತಲುಪಲು ನೆರವಾದ ತಂಡ ಮತ್ತು ಹಾಕಿ ಇಂಡಿಯಾಗೂ ಅಭಾರಿ’ ಎಂದು ಭಾರತ ತಂಡದ ಉಪನಾಯಕ ತಿಳಿಸಿದರು.

ಸವಿತಾ ಅವರಿಗೆ ಇದು ಸತತ ಮೂರನೇ ‘ವರ್ಷದ ಮಹಿಳಾ ಗೋಲ್‌ ಕೀಪರ್’ ಪ್ರಶಸ್ತಿ ಎನಿಸಿತು. ಅವರು 2021, 2022ರಲ್ಲೂ ಈ ಪ್ರಶಸ್ತಿಗೆ ಪಾತ್ರರಾಗಿದ್ದರು. ಈ ವರ್ಷ ಆಸ್ಟ್ರೇಲಿಯಾ ಎದುರಿನ ಟೆಸ್ಟ್‌, ಏಷ್ಯನ್ ಗೇಮ್ಸ್‌ನಲ್ಲಿ ಅವರು ಉತ್ತಮ ಪ್ರದರ್ಶನ ನೀಡಿದ್ದರು. ಅಕ್ಟೋಬರ್‌ನಲ್ಲಿ ನಡೆದ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಗೆಲ್ಲುವಲ್ಲೂ 33 ವರ್ಷದ ಸವಿತಾ ಕೊಡುಗೆ ಗಮನಾರ್ಹ.

‘ತಂಡದ ಸಹ ಆಟಗಾರ್ತಿಯರಿಗೆ, ನೆರವು ಸಿಬ್ಬಂದಿಗೆ ಕೃತಜ್ಞ. ಈ ಪ್ರಶಸ್ತಿ ಹೆಚ್ಚು ಶ್ರಮ ಹಾಕಲು ಪ್ರೇರಣೆ ನೀಡಲಿದೆ’ ಎಂದರು.

ನೆದರ್ಲೆಂರ್ಡ್‌ನ ಕ್ಸಾನ್ ಡಿ ವಾರ್ಡ್ ಅವರು 2023ರ ಎಫ್‌ಐಎಚ್‌ ವರ್ಷದ ಆಟಗಾರ್ತಿ ಗೌರವಕ್ಕೆ ಪಾತ್ರರಾದರು.

ಡಚ್‌ ಗೋಲ್‌ಕೀಪರ್ ಪಿರ್ಮಿನ್ ಬ್ಲಾಕ್ ಅವರು ಎಚ್‌ಐಎಚ್‌ ವರ್ಷದ ಗೋಲ್‌ಕೀಪರ್(ಪುರುಷರ ವಿಭಾಗ) ಪ್ರಶಸ್ತಿ ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT