ನವದೆಹಲಿ: ಭಾರತದ ಸೈಕ್ಲಿಸ್ಟ್ ರೊನಾಲ್ಡೊ ಸಿಂಗ್ ಲೈತೊಂಜಾಮ್ ಅವರು ಮಲೇಷ್ಯಾದ ನಿಯಾಲಿಯಲ್ಲಿ ನಡೆಯುತ್ತಿರುವ ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ.
ಟಾರ್ಗೆಟ್ ಒಲಿಂಪಿಕ್ ಪೋಡಿಯಂ ಯೋಜನೆ (ಟಾಪ್ಸ್) ಯೋಜನೆಯಲ್ಲಿ ಸ್ಥಾನ ಪಡೆದಿರುವ ರೊನಾಲ್ಡೊ ಅವರು ಪುರುಷರ ಆರ್16 ಸ್ಪ್ರಿಂಟ್‌ನಲ್ಲಿ ಅವರು 9.877 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಇದರೊಂದಿಗೆ ರಾಷ್ಟ್ರೀಯ ದಾಖಲೆ ಬರೆದರು.
’ಏಷ್ಯನ್ ಟ್ರ್ಯಾಕ್ ಸೈಕ್ಲಿಂಗ್‌ನಲ್ಲಿ ಸ್ಪ್ರಿಂಟ್ ಕ್ವಾಲಿಫಿಕೇಷನ್‌ನಲ್ಲಿ ರೊನಾಲ್ಡೊ ಅವರು ದಾಖಲೆ ಬರೆದಿದ್ದಾರೆ. ಇಲ್ಲಿ ಹತ್ತನೇ ಸ್ಥಾನ ಪಡೆದಿದ್ದಾರೆ‘ ಎಂದು ಭಾರತ ಕ್ರೀಡಾ ಪ್ರಾಧಿಕಾರ (ಸಾಯ್) ಟ್ವೀಟ್ ಮಾಡಿದೆ.
ಮಣಿಪುರದ 21 ವರ್ಷದ ರೊನಾಲ್ಡೊ ಹೋದ ಆವೃತ್ತಿಯ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಏಷ್ಯಾ ಮಟ್ಟದಲ್ಲಿ ಈಸಾಧನೆ ಮಾಡಿದ್ದ ಭಾರತದ ಮೊದಲ ಸೈಕ್ಲಿಸ್ಟ್ ಎನಿಸಿದ್ದರು. ಒಂದು ಕಿ.ಮೀ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.