ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೇಟ್‌ಲಿಫ್ಟಿಂಗ್‌: ಭಾರತಕ್ಕೆ 11 ಚಿನ್ನ

Published : 18 ಸೆಪ್ಟೆಂಬರ್ 2024, 13:26 IST
Last Updated : 18 ಸೆಪ್ಟೆಂಬರ್ 2024, 13:26 IST
ಫಾಲೋ ಮಾಡಿ
Comments

ಸುವಾ (ಫಿಜಿ): ಭಾರತದ ವೇಟ್‌ಲಿಫ್ಟರ್‌ಗಳು ಇಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಯೂತ್, ಜೂನಿಯರ್ ಮತ್ತು ಸೀನಿಯರ್ ವೇಟ್‌ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಈತನಕ 11 ಚಿನ್ನ ಮತ್ತು ಮೂರು ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.

ಬಾಬುಲಾಲ್ ಹೆಂಬ್ರೋಮ್ ಅವರು 49 ಕೆಜಿ ಯೂತ್ ಪುರುಷರ ವಿಭಾಗದ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 114 ಕೆಜಿ ಎತ್ತುವ ಮೂಲಕ ಕಾಮನ್‌ವೆಲ್ತ್ ಮತ್ತು ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನ ಗೆದ್ದರು.

ಮಿನಾ ಸಾಂತಾ ಅವರು 55 ಕೆಜಿ ಯೂತ್‌ ಮಹಿಳೆಯರ ವಿಭಾಗದ ಸ್ನ್ಯಾಚ್‌ನಲ್ಲಿ 81 ಕೆಜಿ ಹಾಗೂ ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 99 ಕೆಜಿ ಹೀಗೆ ಒಟ್ಟು 180 ಕೆಜಿ ಭಾರ ಎತ್ತಿ ರಾಷ್ಟ್ರೀಯ ದಾಖಲೆ ನಿರ್ಮಿಸಿದರು.

ಬೇಡಬರತ್ ಭಾರಾಲಿ ಅವರು 73 ಕೆಜಿ ಯೂತ್‌ ಪುರುಷರ ವಿಭಾಗದ ಸ್ನ್ಯಾಚ್, ಕ್ಲೀನ್ ಮತ್ತು ಜರ್ಕ್‌ನಲ್ಲಿ ಒಟ್ಟು 200 ಕೆಜಿ ಪ್ರಯತ್ನದೊಂದಿಗೆ ರಾಷ್ಟ್ರೀಯ ದಾಖಲೆ ಬರೆದರು.

ಜ್ಯೋಷ್ನಾ ಸಬರ್, ಆಕಾಂಕ್ಷಾ ವ್ಯವಹಾರೆ, ಅಶ್ಮಿತಾ ಧೋನೆ, ಭಾರ್ಗವಿ ಬಿ, ಎ. ಮಹಾರಾಜನ್, ವಿ. ಕಿಶೋರ್, ಟಿ. ಮಾಧವನ್, ಬೋಲೋ ಯಾಲಂ ಚಿನ್ನ ಗೆದ್ದ ಭಾರತದ ಇತರ ವೇಟ್‌ಲಿಫ್ಟರ್‌ಗಳು. ಚಾಂಪಿಯನ್‌ಷಿಪ್‌ ಇದೇ 21ರವರೆಗೆ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT