ನವದೆಹಲಿ: ಭಾರತ ಒಲಿಂಪಿಕ್ ಸಂಸ್ಥೆ ಮತ್ತು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ಅಧ್ಯಕ್ಷ, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಸದಸ್ಯ ನರಿಂದರ್ ಬಾತ್ರಾ ಅವರು ಕ್ಯಾಪಿಟಲ್ ಫೌಂಢೇಷನ್‌ನ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕ್ರೀಡಾಕ್ಷೇತ್ರಕ್ಕೆ ನೀಡಿದ ಅನುಪಮ ಕೊಡುಗೆಗಾಗಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಫೌಂಡೇಷನ್ ತಿಳಿಸಿದೆ.

ನ್ಯಾಯಾಧೀಶ ಕೃಷ್ಣ ಅಯ್ಯರ್ ಅವರ 106ನೇ ಜನ್ಮ ದಿನಾಚರಣೆ ಅಂಗವಾಗಿ ಭಾನುವಾರ ನಡೆದ ವಾರ್ಷಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕಾರ್ಯಕ್ರಮ ವರ್ಚುವಲ್ ಆಗಿ ನಡೆಯಿತು. ಬಾತ್ರಾ ಅವರನ್ನು ಅಭಿನಂದಿಸಿದ ಹಾಕಿ ಇಂಡಿಯಾದ ಅಧ್ಯಕ್ಷ ಗ್ಯಾನೇಂದ್ರೊ ನಿಂಗೊಂಬಮ್ ‘ಭಾರತದಲ್ಲಿ ಕ್ರೀಡಾ ಆಡಳಿತಕ್ಕೆ ವೃತ್ತಿಪರ ಸ್ಪರ್ಶ ನೀಡಿದವರಲ್ಲಿ ಬಾತ್ರಾ ಪ್ರಮುಖರು. ಕ್ರೀಡಾಕ್ಷೇತ್ರದ ಬೆಳವಣಿಗೆಗೆ ಅವರು ನೀಡಿರುವ ಕಾಣಿಕೆಯ ಹಿನ್ನೆಲೆಯಲ್ಲಿ ಈ ಪ್ರಶಸ್ತಿಗೆ ಅವರು ಸೂಕ್ತ ವ್ಯಕ್ತಿ’ ಎಂದು ಅಭಿಪ್ರಾಯಪಟ್ಟರು.

‘ಹಾಕಿ ಇಂಡಿಯಾಗೆ ಅಧ್ಯಕ್ಷರಾಗಿದ್ದಾಗ ಭಾರತದಲ್ಲಿ ಈ ಕ್ರೀಡೆಯನ್ನು ಬೆಳೆಸಲು ಅವರು ಹಾಕಿಕೊಂಡ ಯೋಜನೆಗಳು ಗಮನಾರ್ಹ. ಆ ಯೋಜನೆಗಳಿಂದಾಗಿ ಭಾರತ ಹಾಕಿ ಕ್ರಾಂತಿಕಾರಿ ಬೆಳವಣಿಗೆ ಕಂಡಿತ್ತು’ ಎಂದು ಅವರು ಹೇಳಿದರು.

ಮಾಜಿ ಹಾಕಿ ಆಟಗಾರರಾಗಿರುವ ಬಾತ್ರಾ 1997ರಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಕಿ ಸಂಸ್ಥೆಯ ಅಧ್ಯಕ್ಷರಾಗುವ ಮೂಲಕ ಕ್ರೀಡಾ ಆಡಳಿತದ ಕಡೆಗೆ ಹೊರಳಿದ್ದರು. 2011ರ ವರೆಗೆ ಅವರು ಆ ಸ್ಥಾನದಲ್ಲಿ ಮುಂದುವರಿದಿದ್ದರು. 2005ರಿಂದ 2013ರ ವರೆಗೆ ಡೆಲ್ಲಿ ಕ್ರಿಕೆಟ್ ಸಂಸ್ಥೆಯ ಖಜಾಂಚಿಯಾಗಿಯೂ 2014ರಿಂದ 2016ರ ವರೆಗೆ ಹಾಕಿ ಇಂಡಿಯಾದ ಪ್ರಧಾನ ಕಾರ್ಯದರ್ಶಿಯಾಗಿಯೂ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.