ಚಾಂಗ್ವಾನ್, ದಕ್ಷಿಣ ಕೊರಿಯಾ: ಮೆಹುಲಿ ಘೋಷ್ ಮತ್ತು ಶಾಹು ತುಷಾರ್ ಮಾನೆ ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನಲ್ಲಿ ಬುಧವಾರ ಚಿನ್ನದ ಪದಕಕ್ಕೆ ಗುರಿಯಿಟ್ಟರು. 10 ಮೀಟರ್ಸ್ ಏರ್ ರೈಫಲ್ ಮಿಶ್ರ ತಂಡ ವಿಭಾಗದಲ್ಲಿ ಭಾರತದ ಜೋಡಿಗೆ ಪದಕ ಒಲಿಯಿತು. ಇದು ಟೂರ್ನಿಯಲ್ಲಿ ದೇಶ ಶೂಟರ್ಗಳು ಗೆದ್ದ ಎರಡನೇ ಚಿನ್ನವಾಗಿದೆ.

ಅರ್ಜುನ್ ಬಬೂತಾಪುರುಷರ 10 ಮೀಟರ್ಸ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿಸೋಮವಾರ ಚಿನ್ನ ಜಯಿಸಿದ್ದರು.

ಫೈನಲ್ ಹಣಾಹಣಿಯಲ್ಲಿ ಮೆಹುಲಿ ಮತ್ತು ತುಷಾರ್ 17–13ರಿಂದ ಹಂಗರಿಯ ಈಸ್ತರ್ ಮೆಸ್ಜರೋಸ್ ಮತ್ತು ಈಸ್ತವಾನ್ ಪೆನ್ ಅವರಿಗೆ ಸೋಲುಣಿಸಿದರು. ಇಸ್ರೇಲ್ ಮತ್ತು ಜೆಕ್ ಗಣರಾಜ್ಯದ ಶೂಟರ್ಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದರು.

ಸೀನಿಯರ್ ಮಟ್ಟದಲ್ಲಿ ದೇಶದ ಪರ ತುಷಾರ್ ಅವರಿಗೆ ಇದು ಮೊದಲ ಚಿನ್ನದ ಪದಕ. ಮೆಹುಲಿ ಅವರು 2019ರಲ್ಲಿ ನೇಪಾಳದ ಕಠ್ಮಂಡುನಲ್ಲಿ ನಡೆದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಚಿನ್ನ ಜಯಿಸಿದ್ದರು.

ಶಿವ–ಪಲಕ್ಗೆ ಕಂಚು: 10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಪಲಕ್ ಮತ್ತು ಶಿವ ನರ್ವಾಲ್ ಜೋಡಿಯು ಕಂಚಿನ ಪದಕ ಗೆದ್ದುಕೊಂಡಿತು. ಮಿಶ್ರ ತಂಡ ವಿಭಾಗದ ಈ ಸ್ಪರ್ಧೆಯಲ್ಲಿ ಭಾರತದ ಶೂಟರ್ಗಳು 16–0ಯಿಂದ ಕಜಕಸ್ತಾನದ ಐರಿನಾ ಲೋಕ್ತಿನೊವಾ ಮತ್ತು ವಲೇರಿಯಾ ರಕೀಂಜಾನ್ ಅವರನ್ನು ಮಣಿಸಿದರು. ಈ ಹಣಾಹಣಿಯಲ್ಲಿ ಶಿವ– ಪಲಕ್ ಸಂಪೂರ್ಣ ಪಾರಮ್ಯ ಮೆರೆದರು.

ಭಾರತ(ಎರಡು ಚಿನ್ನ ಮತ್ತು ಒಂದು ಕಂಚು) ತಂಡವು ಸದ್ಯ ಪದಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ. ಸರ್ಬಿಯಾ ಮೊದಲ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.