ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಲಿಂಪಿಕ್ಸ್‌ನಲ್ಲಿ ಅನರ್ಹಗೊಂಡ ಬಳಿಕ ವಿನೇಶಾಳ ಮೊದಲ ಪ್ರತಿಕ್ರಿಯೆ ಹೀಗಿತ್ತು...

Published 7 ಆಗಸ್ಟ್ 2024, 15:42 IST
Last Updated 7 ಆಗಸ್ಟ್ 2024, 15:42 IST
ಅಕ್ಷರ ಗಾತ್ರ

ಪ್ಯಾರಿಸ್: ಒಲಿಂಪಿಕ್ಸ್ ಕುಸ್ತಿ ಸ್ಪರ್ಧೆಯಿಂದ ಅನರ್ಹಗೊಂಡಿರುವ ವಿನೇಶಾ ಫೋಗಟ್ ಅವರ ಮೊದಲ ಪ್ರತಿಕ್ರಿಯೆ ಹೊರಬಂದಿದೆ.

'ಪದಕ ಗೆಲ್ಲಲು ಸಾಧ್ಯವಾಗದಿರುವುದು ದುರದೃಷ್ಟಕರ. ಆದರೆ ಇವೆಲ್ಲವೂ ಕ್ರೀಡೆಯ ಭಾಗ' ಎಂದು ಭಾರತೀಯ ತರಬೇತುದಾರರನ್ನು ಸಮಾಧಾನಪಡಿಸಿರುವುದಾಗಿ ತಿಳಿದು ಬಂದಿದೆ.

100 ಗ್ರಾಂ ತೂಕ ಹೆಚ್ಚಿದ ಕಾರಣ ಮಹಿಳೆಯರ 50 ಕೆ.ಜಿ ಕುಸ್ತಿಯ ಫೈನಲ್‌ನಲ್ಲಿ ಆಡುವ ಅವಕಾಶದಿಂದ ವಿನೇಶಾ ವಂಚಿತರಾಗಿದ್ದರು.

ಈ ಸುದ್ದಿ ಕೇಳಿದ ಬಳಿಕ ಭಾರತೀಯ ತರಬೇತುದಾರರಾದ ವಿರೇಂದರ್ ದಹಿಯಾ ಮತ್ತು ಮಂಜೀತ್ ರಾಣಿ ಅವರು ವಿನೇಶಾ ಅವರನ್ನು ಭೇಟಿಯಾಗಿದ್ದರು.

'ವಿನೇಶಾ ಅನರ್ಹಗೊಂಡಿರುವ ಸುದ್ದಿ ನಮ್ಮೆಲ್ಲರನ್ನು ಆಘಾತಗೊಳಿಸಿತ್ತು. ನಾವು ವಿನೇಶಾ ಅವರನ್ನು ಭೇಟಿಯಾಗಿ ಸಂತೈಸಲು ಪ್ರಯತ್ನಿಸಿದೆವು. ಆದರೆ ಆಕೆ ಧೈರ್ಯಶಾಲಿ. ಪದಕ ಕಳೆದುಕೊಂಡಿರುವುದು ದುರದೃಷ್ಟಕರ. ಇವೆಲ್ಲವೂ ಆಟದ ಭಾಗ' ಎಂದು ತಮ್ಮನ್ನು ಸಮಾಧಾನಪಡಿಸಿರುವುದಾಗಿ ವಿರೇಂದರ್ ದಹಿಯಾ ತಿಳಿಸಿದ್ದಾರೆ.

'ವಿನೇಶಾ ಅವರ ಗೆಲುವನ್ನು ಸಂಭ್ರಮಿಸಲು ಇಡೀ ದೇಶವೇ ಕಾತರದಲ್ಲಿತ್ತು. ಕನಿಷ್ಠ ಬೆಳ್ಳಿ ಪದಕವನ್ನು ಗೆಲ್ಲುವ ಭರವಸೆಯನ್ನು ವಿನೇಶಾ ನೀಡಿದ್ದರು' ಎಂದು ಅವರು ಹೇಳಿದ್ದಾರೆ.

ಭಾರತ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿ.ಟಿ.ಉಷಾ ಸೇರಿದಂತೆ ಹಲವು ಅಧಿಕಾರಿಗಳು ವಿನೇಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT