ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

disqualification

ADVERTISEMENT

ಪ್ರಜ್ವಲ್‌ ರೇವಣ್ಣ ಸಂಸದ ಸ್ಥಾನ ಅನರ್ಹಕ್ಕೆ ಕಾರಣಗಳಿವು

ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಒದಗಿಸಿದ್ದ ಆರೋಪಗಳು ಸಾಬೀತಾಗಿರುವ ಹಿನ್ನೆಲೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಸದಸ್ಯ ಪ್ರಜ್ವಲ್ ರೇವಣ್ಣ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
Last Updated 2 ಸೆಪ್ಟೆಂಬರ್ 2023, 5:06 IST
ಪ್ರಜ್ವಲ್‌ ರೇವಣ್ಣ ಸಂಸದ ಸ್ಥಾನ ಅನರ್ಹಕ್ಕೆ ಕಾರಣಗಳಿವು

ಗಜೇಂದ್ರಗಡ: ರಾಹುಲ್‌ ಗಾಂಧಿ ಅನರ್ಹತೆ ಖಂಡಿಸಿ ಮೌನ ಪ್ರತಿಭಟನೆ

ಗಜೇಂದ್ರಗಡ: ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸುವ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿ ಗಜೇಂದ್ರಗಡ-ನರೇಗಲ್ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಪಟ್ಟಣದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದರು.
Last Updated 12 ಜುಲೈ 2023, 15:34 IST
ಗಜೇಂದ್ರಗಡ: ರಾಹುಲ್‌ ಗಾಂಧಿ ಅನರ್ಹತೆ ಖಂಡಿಸಿ ಮೌನ ಪ್ರತಿಭಟನೆ

ಚಾಮರಾಜನಗರ | ರಾಹುಲ್‌ ಗಾಂಧಿ ಅನರ್ಹತೆ ಖಂಡಿಸಿ ಕಾಂಗ್ರೆಸ್‌ ಮೌನ ಪ್ರತಿಭಟನೆ

ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಬುಧವಾರ ನಗರದಲ್ಲಿ ಮೌನ ಪ್ರತಿಭಟನೆ ನಡೆಸಿದರು.
Last Updated 12 ಜುಲೈ 2023, 12:31 IST
ಚಾಮರಾಜನಗರ | ರಾಹುಲ್‌ ಗಾಂಧಿ ಅನರ್ಹತೆ ಖಂಡಿಸಿ ಕಾಂಗ್ರೆಸ್‌ ಮೌನ ಪ್ರತಿಭಟನೆ

ಲೋಕಸಭೆ ಸದಸ್ಯತ್ವದಿಂದ ಅನರ್ಹತೆ: ರಾಹುಲ್‌ಗೆ ಮನೆ ನೀಡಲು ಮುಂದಾದ ‘ಕೈ’ ನಾಯಕ

ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಂಡ ನಂತರ ದೆಹಲಿಯಲ್ಲಿರುವ ಅಧಿಕೃತ ಬಂಗಲೆಯನ್ನು ಖಾಲಿ ಮಾಡುವಂತೆ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಗೆ ನೋಟಿಸ್‌ ನೀಡಲಾಗಿದ್ದು, ಉತ್ತರ ಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಅಜಯ್ ರೈ ಸಾಂಕೇತಿಕವಾಗಿ ತಮ್ಮ ಮನೆಯನ್ನು ರಾಹುಲ್‌ಗೆ ಅರ್ಪಿಸಿದ್ದಾರೆ.
Last Updated 29 ಮಾರ್ಚ್ 2023, 10:17 IST
ಲೋಕಸಭೆ ಸದಸ್ಯತ್ವದಿಂದ ಅನರ್ಹತೆ: ರಾಹುಲ್‌ಗೆ ಮನೆ ನೀಡಲು ಮುಂದಾದ ‘ಕೈ’ ನಾಯಕ

ಸದಸ್ಯತ್ವ ಮರುಸ್ಥಾಪನೆಯಲ್ಲಿ ವಿಳಂಬ: ಕೋರ್ಟ್‌ ಮೊರೆ ಹೋದ ಲಕ್ಷದ್ವೀಪದ ಅನರ್ಹ ಸಂಸದ

‘ನನ್ನ ಲೋಕಸಭಾ ಸದಸ್ಯತ್ವವನ್ನು ಮರುಸ್ಥಾಪಿಸಲು ಲೋಸಕಭೆಯ ಕಾರ್ಯದರ್ಶಿ ವಿಳಂಬ ಮಾಡುತ್ತಿದ್ದಾರೆ. ಆದ್ದರಿಂದ ನನ್ನ ಸದಸ್ಯತ್ವವನ್ನು ಮರುಸ್ಥಾಪಿಸಲು ನಿರ್ದೇಶಿಸಬೇಕು’ ಎಂದು ಕೋರಿ ಲಕ್ಷದ್ವೀಪ ಅನರ್ಹ ಸಂಸದ ಮೊಹಮ್ಮದ್‌ ಫೈಝಲ್‌ ಪಿ.ಪಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಮಂಗಳವಾರ ಒಪ್ಪಿಗೆ ನೀಡಿದೆ.
Last Updated 28 ಮಾರ್ಚ್ 2023, 14:08 IST
ಸದಸ್ಯತ್ವ ಮರುಸ್ಥಾಪನೆಯಲ್ಲಿ ವಿಳಂಬ: ಕೋರ್ಟ್‌ ಮೊರೆ ಹೋದ ಲಕ್ಷದ್ವೀಪದ ಅನರ್ಹ ಸಂಸದ

ಮೈಸೂರು: ‘ರಾಹುಲ್‌ ಅನರ್ಹತೆ ಬಿಜೆಪಿ ಕುತಂತ್ರ’ ಎಚ್‌.ವಿಶ್ವನಾಥ್‌ ಟೀಕೆ

‘ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್‌ ಪಕ್ಷದ ನಾಯಕ ರಾಹುಲ್‌ ಗಾಂಧಿಗೆ ಗರಿಷ್ಠಮಿತಿಯ ಶಿಕ್ಷೆ ನೀಡಿರುವುದು ಹಾಗೂ ಸಂಸತ್‌ ಸದಸ್ಯತ್ವ ರದ್ದತಿ ಪ್ರಕರಣ ಜನತಂತ್ರದ ಅಣಕು, ಅಘೋಷಿತ ತುರ್ತು ಪರಿಸ್ಥಿತಿಯಂತಿದೆ‘ ಎಂದು ವಿಧಾನ ಪರಿಷತ್‌ ಸದಸ್ಯ, ಬಿಜೆಪಿಯ ಎಚ್‌.ವಿಶ್ವನಾಥ್‌ ಟೀಕಿಸಿದರು.
Last Updated 26 ಮಾರ್ಚ್ 2023, 6:22 IST
ಮೈಸೂರು: ‘ರಾಹುಲ್‌ ಅನರ್ಹತೆ ಬಿಜೆಪಿ ಕುತಂತ್ರ’  ಎಚ್‌.ವಿಶ್ವನಾಥ್‌ ಟೀಕೆ

ರಾಹುಲ್‌ ಅನರ್ಹತೆ| ‘ಕೈ’ ಕಾರ್ಯಕರ್ತರ ವ್ಯಾಪಕ ಆಕ್ರೋಶ: ಬಿಜೆಪಿಯಿಂದಲೂ ಪ್ರತಿಭಟನೆ

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಸಂಸತ್‌ನಿಂದ ಅನರ್ಹಗೊಳಿಸಿರುವುದಕ್ಕೆ ದೇಶದ ಹಲವು ಕಡೆಗಳಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದ್ದು, ಕಾಂಗ್ರೆಸ್ ಕಾರ್ಯ ಕರ್ತರು ಬೀದಿಗಿಳಿದು ಶನಿವಾರ ಪ್ರತಿಭಟನೆ ನಡೆಸಿದ್ದಾರೆ. ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆದಿದೆ. ಕಾಂಗ್ರೆಸ್‌ಗೆ ತಿರುಗೇಟು ನೀಡಿದ ಬಿಜೆಪಿ ಹಾಗೂ ಶಿವಸೇನಾ (ಶಿಂದೆ ಬಣ) ಕಾರ್ಯಕರ್ತರು ‘ಒಬಿಸಿ’ ಸಮುದಾಯಕ್ಕೆ (ಇತರೆ ಹಿಂದುಳಿದ ವರ್ಗ) ರಾಹುಲ್ ಗಾಂಧಿ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
Last Updated 25 ಮಾರ್ಚ್ 2023, 19:17 IST
ರಾಹುಲ್‌ ಅನರ್ಹತೆ| ‘ಕೈ’ ಕಾರ್ಯಕರ್ತರ ವ್ಯಾಪಕ ಆಕ್ರೋಶ: ಬಿಜೆಪಿಯಿಂದಲೂ ಪ್ರತಿಭಟನೆ
ADVERTISEMENT

ರಾಹುಲ್‌ ಗಾಂಧಿ ಅನರ್ಹತೆ: ಬಿಜೆಪಿ–ಕಾಂಗ್ರೆಸ್ ಜಟಾಪಟಿ ಬಿರುಸು

ಮಾನನಷ್ಟ ಪ್ರಕರಣವೊಂದರಲ್ಲಿ ಸೂರತ್‌ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹಗೊಂಡಿದೆ. ಅದಾನಿ ಕುರಿತು ಸಂಸತ್‌ನಲ್ಲಿ ತಾವು ಆಡಿರುವ ಮಾತಿನಿಂದಾಗಿಯೇ ತಮ್ಮನ್ನು ಅನರ್ಹಗೊಳಿಸಲಾಗಿದೆ ಎಂದು ರಾಹುಲ್‌ ಆಪಾದಿಸಿದ್ದಾರೆ. ಆಡಳಿತಾರೂಢ ಬಿಜೆಪಿ ಇದಕ್ಕೆ ತಿರುಗೇಟು ನೀಡಿದೆ. ಶಿಕ್ಷೆಗೆ ತಡೆಯಾಜ್ಞೆ ತರುವ ಪ್ರಯತ್ನವನ್ನೂ ಕಾಂಗ್ರೆಸ್‌ ಮಾಡಿಲ್ಲ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಲಾಭ ಮಾಡಿಕೊಳ್ಳಲು ರಾಹುಲ್‌ ಅನರ್ಹತೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ
Last Updated 25 ಮಾರ್ಚ್ 2023, 19:17 IST
ರಾಹುಲ್‌ ಗಾಂಧಿ ಅನರ್ಹತೆ: ಬಿಜೆಪಿ–ಕಾಂಗ್ರೆಸ್ ಜಟಾಪಟಿ ಬಿರುಸು

ರಾಹುಲ್ ಅನರ್ಹತೆ | ಬಿಜೆಪಿ ಸೆಲ್ಫ್‌ ಗೋಲು ಹೊಡೆದ ಹಾಗಾಗಿದೆ: ಶಶಿ ತರೂರ್

ಲೋಕಸಭೆ ಸದಸ್ಯ ಸ್ಥಾನದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿರುವ ಕುರಿತು ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಬಿಜೆಪಿ ತಾನಾಗಿಯೇ ಸೆಲ್ಫ್ ಗೋಲು ಹೊಡೆದ ಹಾಗಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
Last Updated 25 ಮಾರ್ಚ್ 2023, 10:06 IST
ರಾಹುಲ್ ಅನರ್ಹತೆ | ಬಿಜೆಪಿ ಸೆಲ್ಫ್‌ ಗೋಲು ಹೊಡೆದ ಹಾಗಾಗಿದೆ: ಶಶಿ ತರೂರ್

ಸಂಪಾದಕೀಯ| ರಾಹುಲ್‌ ಅನರ್ಹತೆ: ವ್ಯವಸ್ಥೆಯ ವರ್ಚಸ್ಸು ಕುಗ್ಗಿಸಿದ ನಡೆ

ದೇಶದ ಅತ್ಯಂತ ಮುಖ್ಯ ವಿರೋಧ ಪಕ್ಷದ ನಾಯಕನನ್ನು ಸಂಸತ್‌ ಸದಸ್ಯತ್ವದಿಂದ ಅನರ್ಹಗೊಳಿಸಿರುವುದು ಭಾರತದ ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ; ಸಾಮಾನ್ಯ ಸಂದರ್ಭಗಳಲ್ಲಿ ಅವರ ಕೃತ್ಯವು ವ್ಯವಸ್ಥೆಯಿಂದ ಇಷ್ಟೊಂದು ಗಂಭೀರವಾದ ಶಿಕ್ಷೆಗೆ ಗುರಿಯಾಗುವಂಥದ್ದಲ್ಲ. ಇದು ವ್ಯವಸ್ಥೆಯ ವರ್ಚಸ್ಸು ಮತ್ತು ವಿಶ್ವಾಸಾರ್ಹತೆಯನ್ನು ತಗ್ಗಿಸುತ್ತದೆ. ವಿರೋಧ ಪಕ್ಷಗಳ ನಾಯಕರು ಮತ್ತು ಟೀಕಾಕಾರರನ್ನು ದಮನಿಸಲು, ಅವರು ರಾಜಕೀಯ ಪ್ರಕ್ರಿಯೆಯಲ್ಲಿ ಭಾಗವಹಿಸುವುದನ್ನು ತಡೆಯಲು ಕಾನೂನು ಮತ್ತು ಇತರ ಎಲ್ಲ ರೀತಿಯ ವ್ಯವಸ್ಥೆಗಳನ್ನು ಬಳಸಿಕೊಳ್ಳುವ ನಿರಂಕುಶಾಧಿಪತ್ಯದ ದೇಶಗಳ ಸಾಲಿಗೆ ಭಾರತವನ್ನೂ ಸೇರಿಸುತ್ತದೆ. ಈ ಹಿಂದೆ ಮಹತ್ವದ ಅನರ್ಹತೆ ಪ್ರಕರಣ ನಡೆದದ್ದು 1975ರಲ್ಲಿ– ಆಗ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರನ್ನು ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಂಸತ್ ಸದಸ್ಯತ್ವದಿಂದ ಅನರ್ಹಗೊಳಿಸಲಾಗಿತ್ತು. ಸಂಚಾರ ನಿಯಮ ಉಲ್ಲಂಘನೆಗೆ ಸಮಾನವಾದ ಒಂದು ತಪ್ಪಿಗೆ ಪ್ರಧಾನಿ ಹುದ್ದೆಯನ್ನೇ ಅವರು ಬೆಲೆಯಾಗಿ ತೆರಬೇಕಾಗಿತ್ತು. ರಾಹುಲ್‌ ಗಾಂಧಿ ಅವರು ಎಸಗಿದ್ದಾರೆ ಎಂದು ಹೇಳಲಾಗುವ ತಪ್ಪು ಅಷ್ಟೊಂದು ಗಂಭೀರವೂ ಅಲ್ಲ. ಇನ್ನೂ ಗಮನಿಸಬೇಕಾದ ವಿಚಾರ ಎಂದರೆ, ಈ ಪ್ರಕರಣದಲ್ಲಿ ಬಂದಿರುವ ಆದೇಶವು ಕಾನೂನಿನ ದೃಷ್ಟಿಯಲ್ಲಿ ಎಷ್ಟರಮಟ್ಟಿಗೆ ಸಶಕ್ತ ಎಂಬುದರ ಬಗ್ಗೆಯೇ ಪ್ರಶ್ನೆಗಳಿವೆ. ವಾಸ್ತವದಲ್ಲಿ ರಾಹುಲ್‌ ಅವರನ್ನು ಅನರ್ಹಗೊಳಿಸಲು ಅನುಸರಿಸಿದ ಪ್ರಕ್ರಿಯೆಯೇ ಪ್ರಶ್ನಾರ್ಹವಾಗಿದೆ.
Last Updated 24 ಮಾರ್ಚ್ 2023, 19:30 IST
ಸಂಪಾದಕೀಯ| ರಾಹುಲ್‌ ಅನರ್ಹತೆ: ವ್ಯವಸ್ಥೆಯ ವರ್ಚಸ್ಸು ಕುಗ್ಗಿಸಿದ ನಡೆ
ADVERTISEMENT
ADVERTISEMENT
ADVERTISEMENT