ನವದೆಹಲಿ: ಭಾರತ ರಾಷ್ಟ್ರೀಯ ರೈಫಲ್ ಸಂಸ್ಥೆಯು ಅಂತರರಾಷ್ಟ್ರೀಯ ಶೂಟರ್ ಜಸ್ಪಾಲ್ ರಾಣಾ ಅವರನ್ನು ಹೈ ಪರ್ಫಾರ್ಮೆನ್ಸ್ ಟ್ರೇನರ್ ಆಗಿ ನೇಮಕ ಮಾಡಿದ್ದರೂ ಅವರು ತಮ್ಮ ಕೋಚ್ ಆಗಿ ಮುಂದುವರಿಯಲಿದ್ದಾರೆ ಎಂದು ಒಲಿಂಪಿಕ್ಸ್ನಲ್ಲಿ ಅವಳಿ ಪದಕ ಗೆದ್ದಿರುವ ಮನು ಭಾಕರ್ ತಿಳಿಸಿದ್ದಾರೆ

ಮನು ಮುಂಬರುವ ವಿಶ್ವ ಚಾಂಪಿಯನ್ಷಿಪ್ನಲ್ಲಿ ಉತ್ತಮ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ. ಟೋಕಿಯೊ ಒಲಿಂಪಿಕ್ಸ್ ನಂತರ ಮನು ಮತ್ತು ಜಸ್ಪಾಲ್ ಅವರ ನಡುವಣ ವೈಮನಸ್ಸು ತಲೆದೋರಿತ್ತು. ಆದರೆ ಪ್ಯಾರಿಸ್ ಒಲಿಂಪಿಕ್ಸ್ಗೆ ಮೊದಲು ಇದನ್ನು ಸರಿಪಡಿಸಿಕೊಡಿದ್ದರು.

‘ಪ್ರಾಮಾಣಿಕವಾಗಿ ಹೇಳುವುದಾದರೆ ಅವರು ನನ್ನ ಕೋಚ್. ಅವರು ತಮ್ಮ ಕೆಲಸದಲ್ಲಿ ಅತ್ಯುತ್ತಮ ಆಗಿದ್ದಾರೆ. ಪ್ರತಿಭಾನ್ವಿತರಾಗಿದ್ದು, ನನಗೆ ಅತ್ಯುತ್ತಮ ಕೋಚ್ ಆಗಿದ್ದಾರೆ’ ಎಂದು ಅವರು ಹೇಳಿದರು. ಸೋಮವಾರ ರಾತ್ರಿ ಬಿಬಿಸಿ 2024ರ ವರ್ಷದ ಮಹಿಳಾ ಕ್ರೀಡಾಪಟು ಪ್ರಶಸ್ತಿ ಗೆದ್ದ ನಂತರ ಅವರು ಮಾತನಾಡಿದರು.

ಟೋಕಿಯೊ ಕ್ರೀಡೆಗಳ ವೇಳೆ ರಾಣಾ ಅವರ ಮಾರ್ಗದರ್ಶನದಲ್ಲಿ ಪರದಾಡಿದ್ದ ಮನು, ಪ್ಯಾರಿಸ್ ಕ್ರೀಡೆಗಳ ವೇಳೆ ಅಮೋಘ ಸಾಧನೆ ತೋರಿ ಸ್ವಾತಂತ್ರ್ಯಾನಂತರ ಒಂದೇ ಒಲಿಂಪಿಕ್ಸ್ನಲ್ಲಿ ಎರಡು ಪದಕ ಗೆದ್ದ ದೇಶದ ಮೊದಲ ಕ್ರೀಡಾಪಟು ಎನಿಸಿದ್ದರು.

ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 10 ಮೀ. ಏರ್ ಪಿಸ್ತೂಲ್ ಮತ್ತು 10 ಮೀ. ಏರ್ ಪಿಸ್ತೂಲ್ ಮಿಶ್ರ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.