ಬೆಂಗಳೂರು: ಕರ್ನಾಟಕ ಬಾಲಕಿಯರ ತಂಡವು ಪುದುಚೇರಿಯ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 40ನೇ ಯೂತ್ ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿತು.

ಬುಧವಾರ ನಡೆದ ಫೈನಲ್ ಹಣಾಹಣಿಯಲ್ಲಿ ಮಹಾರಾಷ್ಟ್ರ ತಂಡ 76–49ರಿಂದ ಕರ್ನಾಟಕ ತಂಡವನ್ನು ಮಣಿಸಿ ಚಿನ್ನದ ಪದಕ ಜಯಿಸಿತು. ಸೆಮಿಫೈನಲ್ನಲ್ಲಿ ಛತ್ತೀಸಗಢ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತು ತಲುಪಿದ್ದ ಕಳೆದ ಬಾರಿಯ ಚಾಂಪಿಯನ್ ಕರ್ನಾಟಕದ ಬಾಲಕಿಯರು ಮಹಾರಾಷ್ಟ್ರ ತಂಡದ ಸಾಂಘಿಕ ಆಟದ ಎದುರು ನಿರುತ್ತರರಾದರು.

ಮಹಾರಾಷ್ಟ್ರ ಪರ ರೇವಾ ಕುಲಕರ್ಣಿ ಮತ್ತು ವೈಷ್ಣವಿ ಕ್ರಮವಾಗಿ 26 ಮತ್ತು 25 ಅಂಕ ಗಳಿಸಿ ಗೆಲುವಿನ ರೂವಾರಿಗಳಾದರು. ಕರ್ನಾಟಕದ ಪರ ಮೆಹಕ್ ಶರ್ಮಾ 16, ನಾಯಕಿ ಅದಿತಿ ಸುಬ್ರಮಣ್ಯನ್ ಮತ್ತು ನಿರೀಕ್ಷಾ ಬಿ.ಸಿ ತಲಾ 10 ಪಾಯಿಂಟ್ಸ್ ಕಲೆ ಹಾಕಿದರು.

ರನ್ನರ್ಸ್ ಅಪ್ ಕರ್ನಾಟಕ ತಂಡಕ್ಕೆ ₹2 ಲಕ್ಷ ಬಹುಮಾನ ಲಭಿಸಿತು. ಜೊತೆಗೆ ಫಿಬಾ ಏಷ್ಯಾ ಅಧ್ಯಕ್ಷ ಕೆ.ಗೋವಿಂದರಾಜ್ ಅವರು ₹5 ಲಕ್ಷ ಪ್ರೋತ್ಸಾಹಧನ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.