ಅಸ್ತಾನ (ಕಜಕಿಸ್ತಾನ): ಭಾರತದ ಅನುಪಮಾ ಉಪಾಧ್ಯಾಯ ಮತ್ತು ತರುಣ್ ಮನ್ನೇಪಳ್ಳಿ ಅವರು ಕಜಕಸ್ತಾನ ಇಂಟರ್ನ್ಯಾಷನಲ್ ಬ್ಯಾಡ್ಮಿಂಟನ್ ಚಾಲೆಂಜ್ ಟೂರ್ನಿಯ ಮಹಿಳಾ ಮತ್ತು ಪುರುಷರ ಸಿಂಗಲ್ಸ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದರು.

ಕಳೆದ ತಿಂಗಳು ಪೋಲಿಷ್ ಇಂಟರ್ನ್ಯಾಷನಲ್ ಚಾಲೆಂಜ್ ಗೆದ್ದ ಅಲ್ಮೋರಾದ 19 ವರ್ಷದ ಅನುಪಮಾ, 41 ನಿಮಿಷಗಳ ಫೈನಲ್ ಪಂದ್ಯದಲ್ಲಿ ಇಶಾರಾಣಿ ಬರುವಾ ವಿರುದ್ಧ 21-15, 21-16 ಅಂತರದಲ್ಲಿ ಜಯಗಳಿಸಿ ಸತತ ಎರಡನೇ ಪ್ರಶಸ್ತಿ ಜಯಿಸಿದರು.

ಕಳೆದ ಡಿಸೆಂಬರ್ನಲ್ಲಿ ಗುವಾಹಟಿ ಯಲ್ಲಿ ನಡೆದ ಸೀನಿಯರ್ ರಾಷ್ಟ್ರೀಯ ಚಾಂಪಿಯನ್ಷಿಪ್ನಲ್ಲಿ ರನ್ನರ್ ಅಪ್ ಆಗಿದ್ದ 22 ವರ್ಷದ ತರುಣ್, ಎಂಟನೇ ಶ್ರೇಯಾಂಕದ ಮಲೇಷ್ಯಾದ ಸೂಂಗ್ ಜೂ ವೆನ್ ಅವರನ್ನು 21-10, 21-19 ಅಂತರದಿಂದ ಸೋಲಿಸಿ ಚೊಚ್ಚಲ ಅಂತರರಾಷ್ಟ್ರೀಯ ಪ್ರಶಸ್ತಿ ಗೆದ್ದರು.

ಮಿಶ್ರ ಡಬಲ್ಸ್ ಫೈನಲ್ನಲ್ಲಿ ಭಾರತದ ಸಂಜಯ ಶ್ರೀವತ್ಸ ಧನರಾಜ್ ಮತ್ತು ಮನೀಷಾ ಕೆ ಜೋಡಿ ಮಲೇಷ್ಯಾದ ವಾಂಗ್ ಟಿಯೆನ್ ಸಿ ಮತ್ತು ಲಿಮ್ ಚಿವ್ ಸಿಯೆನ್ ವಿರುದ್ಧ 21-9, 7-21, 12-21 ಅಂತರದಲ್ಲಿ ಸೋತು, ರನ್ನರ್ ಅಪ್ ಸ್ಥಾನ ಪಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.