ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆನ್ಯಾ ಅಥ್ಲೀಟ್‌ ರೋನೊ ನಿಧನ

Published 15 ಫೆಬ್ರುವರಿ 2024, 16:08 IST
Last Updated 15 ಫೆಬ್ರುವರಿ 2024, 16:08 IST
ಅಕ್ಷರ ಗಾತ್ರ

ನೈರೋಬಿ: ಕೆನ್ಯಾದ ದೂರದ ಓಟಗಾರ, 81 ದಿನಗಳಲ್ಲಿ ನಾಲ್ಕು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದ ಹೆನ್ರಿ ರೋನೊ (72) ಅವರು ನಿಧನರಾದರು ಎಂದು ಅಥ್ಲೆಟಿಕ್ಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಅಮೆರಿಕದ ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಯಾಗಿದ್ದ ರೋನೊ 1978ರಲ್ಲಿ 3,000 ಮೀಟರ್, 5,000 ಮೀಟರ್ ಮತ್ತು 3,000 ಮೀಟರ್  ಸ್ಟೀಪಲ್‌ಚೇಸ್‌  ವಿಭಾಗಗಳಲ್ಲಿ ನಾಲ್ಕು ವಿಶ್ವ ದಾಖಲೆಗಳೊಂದಿಗೆ ಮಿಂಚಿದ್ದರು.

‘ಕೆನ್ಯಾದ ಅತ್ಯುತ್ತಮ ದೂರದ ಓಟಗಾರರಲ್ಲಿ ರೋನೊ ಒಬ್ಬರು. 

ಆದರೆ ಅವರು 1980ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರಲಿಲ್ಲ. ಎರಡು ಪದಕಗಳನ್ನು ಗೆಲ್ಲುತ್ತಿದ್ದರು. ಅನಾರೋಗ್ಯದ ಕಾರಣ ಹತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು’ ಎಂದು ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಕಿಪ್ಚೋಜ್ ಕೀನೊ ತಿಳಿಸಿದ್ದಾರೆ .

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT