ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಲಿನ್‌ ಜೋಶಿ ಅಮೋಘ ಆಟ

Last Updated 11 ಆಗಸ್ಟ್ 2018, 19:06 IST
ಅಕ್ಷರ ಗಾತ್ರ

ಬೆಂಗಳೂರು: ಸ್ಥಳೀಯ ಆಟಗಾರ ಖಾಲಿನ್‌ ಜೋಷಿ ಅವರು ಇಲ್ಲಿ ನಡೆಯುತ್ತಿರುವ ಟೇಕ್‌ ಸೊಲ್ಯೂಷನ್ಸ್‌ ಮಾಸ್ಟರ್ಸ್‌ ಗಾಲ್ಫ್‌ ಟೂರ್ನಿಯ ಮೂರನೇ ಸುತ್ತಿನಲ್ಲಿ ಅಮೋಘ ಆಟ ಆಡಿದರು.

ಶನಿವಾರ ಇಲ್ಲಿನ ಕರ್ನಾಟಕ ಗಾಲ್ಫ್‌ ಅಸೊಸಿಯೇಷನ್‌ ಕೇಂದ್ರದಲ್ಲಿನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ ಅವರು 64 ಸ್ಕೋರ್‌ ಗಳಿಸಿದರು. ಮೂರನೇ ದಿನದ ಅಂತ್ಯಕ್ಕೆ ಅವರು ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ಅವರ ಖಾತೆಯಲ್ಲಿ ಒಟ್ಟು 200 ಸ್ಕೋರ್‌ಗಳಿವೆ.

ಎರಡನೇ ದಿನದ ಅಂತ್ಯಕ್ಕೆ ಅಗ್ರಸ್ಥಾನದಲ್ಲಿದ್ದ ಥಾಯ್ಲೆಂಡ್‌ನ ಡೆಂಥೈ ಬೂನ್ಮಾ ಅವರು 73 ಸ್ಕೋರ್‌ ಸಂಗ್ರಹಿಸಿದರು. ಅವರೂ ಎರಡನೇ ಸ್ಥಾನದಲ್ಲಿದ್ದಾರೆ.

ಅರ್ಜೆಂಟೀನಾದ ಮಿಗುಯೆಲ್‌ ಕಾರ್ಬಲ್ಲೊ 67 ಸ್ಕೋರ್‌ ಗಳಿಸಿದರು. ಅವರ ಖಾತೆಯಲ್ಲಿ ಒಟ್ಟು 199 ಸ್ಕೋರ್‌ಗಳಿವೆ. ಸದ್ಯ, ಅವರು ಅಗ್ರಸ್ಥಾನದಲ್ಲಿದ್ದಾರೆ.

ಭಾರತದ ಇನ್ನಿತರ ಗಾಲ್ಫರ್‌ಗಳಾದ ವಿರಾಜ್‌ ಮಾದಪ್ಪ ಹಾಗೂ ಎಸ್‌. ಚಿಕ್ಕರಂಗಪ್ಪ ಅವರು ಕ್ರಮವಾಗಿ 66 ಹಾಗೂ 68 ಸ್ಕೋರ್‌ ಸಂಗ್ರಹಿಸಿದರು. ಈ ಇಬ್ಬರೂ ಜಂಟಿಯಾಗಿ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT