ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೇಲೊ ಇಂಡಿಯಾ ಕ್ರೀಡಾಕೂಟ: ಗುರುನಿಹಾಲ್‌ಗೆ ಚಿನ್ನದ ಪದಕ

Last Updated 16 ಜನವರಿ 2019, 18:07 IST
ಅಕ್ಷರ ಗಾತ್ರ

ಪುಣೆ: ಜೂನಿಯರ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದು ಗಮನ ಸೆಳೆದಿದ್ದ ಗುರುನಿಹಾಲ್‌ ಸಿಂಗ್ ಗಾರ್ಚ, ಖೇಲೊ ಇಂಡಿಯಾ ಯುವ ಕ್ರೀಡಾಕೂಟದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಬುಧವಾರ ನಡೆದ 21 ವರ್ಷದೊಳಗಿನವರ ಸ್ಕೀಟ್ ವಿಭಾಗದಲ್ಲಿ ಅವರು ಚಿನ್ನದ ಪದಕ ಗೆದ್ದು ಸಂಭ್ರಮಿಸಿದರು.

ಆರಂಭದಲ್ಲಿ ಹಿನ್ನಡೆ ಅನು ಭವಿಸಿದರೂ ಉದ್ವೇಗಕ್ಕೆ ಒಳಗಾದ ಗುರುನಿಹಾಲ್‌ ನಿರಾಯಾಸವಾಗಿ ಪಾಯಿಂಟ್‌ಗಳನ್ನು ಕಲೆ ಹಾಕಿದರು. ಮೊದಲ 30 ಶಾಟ್‌ಗಳ ನಂತರ ಅವರು ರಾಜಸ್ಥಾನದ ಅನಂತಜೀತ್ ಸಿಂಗ್ ನರೂಕಾ ಅವರಿಗಿಂತ ನಾಲ್ಕು ಪಾಯಿಂಟ್‌ಗಳಿಂದ ಹಿಂದಿದ್ದರು. ನಂತರ ಎದುರಾಳಿಯನ್ನು ಹಿಂದಿಕ್ಕಿ ಚಿನ್ನಕ್ಕೆ ಮುತ್ತಿಕ್ಕಿದರು. ಪಂಜಾಬ್‌ನ ಅಭಯ್‌ ಸಿಂಗ್ ಶೆಖಾನ್‌ ಕಂಚಿನ ಪದಕ ಗಳಿಸಿದರು.

ಗುರುನಿಹಾಲ್‌ಗೆ ಈಗ 19 ವರ್ಷ. ಲುಧಿಯಾನದ ಕೃಷಿಕನ ಮಗನಾದ ಅವರಿಗಾಗಿ ತಂದೆ, ಹೊಲದಲ್ಲೇ ಸ್ಕೀಟ್ ರೇಂಜ್‌ ಸ್ಥಾಪಿಸಿದ್ದಾರೆ.

21 ವರ್ಷದೊಳಗಿನವರ 50 ಮೀಟರ್ಸ್ ರೈಫಲ್ ವಿಭಾಗದಲ್ಲಿ ತಮಿಳುನಾಡಿನ ಜಿ.ವರ್ಷಾ ಚಿನ್ನಕ್ಕೆ ಗುರಿ ಇಟ್ಟರು. ಅವರು 447.1 ಪಾಯಿಂಟ್ ಗಳಿಸಿದರು.

ಹರಿಯಾಣದ ಶಿರೀನ್‌ ಗೊದಾರ ಬೆಳ್ಳಿ ಮತ್ತು ಪಶ್ಚಿಮ ಬಂಗಾಳದ ಆಯುಷಿ ಪದ್ದಾರ್‌ ಕಂಚಿನ ಪದಕ ಗೆದ್ದರು. ಮಧ್ಯಪ್ರದೇಶದ ಪೂಜಾ ವಿಶ್ವಕರ್ಮ 17 ವರ್ಷದೊಳಗಿನವರ 50 ಮೀಟರ್ಸ್ ರೈಫಲ್ ಸ್ಪರ್ಧೆಯ ಚಿನ್ನ ಗೆದ್ದರು.

ಹಾಕಿ: ಹರಿಯಾಣ ಸೆಮಿಫೈನಲ್‌ಗೆ

ಜ್ಯೋತಿ ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಹರಿಯಾಣ ತಂಡ ಖೇಲೊ ಇಂಡಿ ಯಾದ ಮಹಿಳೆಯರ ಹಾಕಿಯ ಸೆಮಿಫೈನಲ್ ಪ್ರವೇಶಿಸಿತು. ಬುಧವಾರ ನಡೆದ 21 ವರ್ಷ ದೊಳಗಿನವರ ವಿಭಾಗದ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಹರಿಯಾಣ, ಚಂಡೀಗಡವನ್ನು 8–0ಯಿಂದ ಮಣಿಸಿತು. ‌

ಅಮನ್‌ದೀಪ್‌ ಕೌರ್ ಎರಡು, ಅಮರಿಂದರ್ ಕೌರ್‌, ನವನೀತ್ ಕೌರ್ ಮತ್ತು ಮನೀಷಾ ತಲಾ ಒಂದೊಂದು ಗೋಲು ಗಳಿಸಿದರು. ಪಂಜಾಬ್ ಮತ್ತು ಉತ್ತರ ಪ್ರದೇಶ ನಡುವಿನ ಪಂದ್ಯ 2–2ರಿಂದ ಡ್ರಾ ಆಯಿತು. ಗೋಲು ಗಳಿಕೆ ಆಧಾರದಲ್ಲಿ ಪಂಜಾಬ್‌ ನಾಲ್ಕರ ಘಟ್ಟ ಪ್ರವೇಶಿಸಿತು.

ಜೂಡೊ; ದೆಹಲಿ ಪಾರಮ್ಯ: ದೆಹಲಿಯ ಕ್ರೀಡಾಪಟುಗಳು ಜೂಡೊದಲ್ಲಿ ಪಾರಮ್ಯ ಮೆರೆ ದರು. 12 ಚಿನ್ನ, ಮೂರು ಬೆಳ್ಳಿ ಮತ್ತು ಆರು ಕಂಚಿನ ಪದಕಗಳು ಅವರ ಪಾಲಾದವು. ಪಂಜಾಬ್‌ ನಾಲ್ಕು ಚಿನ್ನ ಗೆದ್ದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT