ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಂಗ್‌ಫಿಷರ್‌ ಅಲ್ಟ್ರಾ ಡರ್ಬಿ ಬೆಂಗಳೂರು; ಇಂಪಾವಿಡ್‌–ವೆಲ್‌ ಕನೆಕ್ಟೆಡ್‌ ಪೈಪೋಟಿ

ದಾಖಲೆ ಮೊತ್ತದ ಬಹುಮಾನಕ್ಕಾಗಿ ತೀವ್ರ ಸ್ಪರ್ಧೆ
Last Updated 20 ಜುಲೈ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ದಾಖಲೆ ಮೊತ್ತದ ಒಟ್ಟು ಬಹುಮಾನ ಮೊತ್ತ ರೂ.2.55 ಕೋಟಿ ನೀಡಲಾಗುತ್ತಿರುವ 'ಕಿಂಗ್‌ಫಿಷರ್‌ ಅಲ್ಟ್ರಾ ಡರ್ಬಿ ಬೆಂಗಳೂರು' ಬೇಸಿಗೆ ರೇಸ್‌ಗಳ ಅತ್ಯಂತ ಶ್ರೀಮಂತ ರೇಸ್‌. ಯುನೈಟೆಡ್‌ ಬ್ರೂವರೀಸ್ ಸಂಸ್ಥೆಯಪ್ರಾಯೋಜಕತ್ವದೊಂದಿಗೆ ಬೆಂಗಳೂರು ಟರ್ಫ್ ಕ್ಲಬ್‌ ಏರ್ಪಡಿಸಿರುವ ಈ ರೇಸ್‌ ಭಾನುವಾರ ಸಂಜೆ 4.30ಕ್ಕೆ ಪ್ರಾರಂಭವಾಗಲಿದೆ.

ಡರ್ಬಿ ಕಣದಲ್ಲಿ 6 ಗಂಡು ಮತ್ತು 4 ಹೆಣ್ಣು ಕುದುರೆಗಳು ಸ್ಪರ್ಧಿಸುತ್ತಿದ್ದು, ಅರ್ಜುನ್‌ ಮಂಗ್ಳೋರ್ಕರ್ ತರಬೇತಿಯಲ್ಲಿ ಪಳಗಿರುವ 'ಇಂಪಾವಿಡ್' ಮತ್ತು ಎಸ್‌.ಪದ್ಮನಾಭನ್ ತರಬೇತಿಯಲ್ಲಿ ಪಳಗಿರುವ 'ವೆಲ್ ಕನೆಕ್ಟೆಡ್' ಪ್ರಮುಖ ಸ್ಪರ್ಧಿಗಳಾಗಿ ಕಂಡು ಬರುತ್ತಿವೆ.

'ಇಂಪಾವಿಡ್' ಹ್ಯಾಟ್ರಿಕ್ ಗೆಲುವು ಪಡೆದ ನಂತರ ಕೋಲ್ಟ್ಸ್ ಚಾಂಪಿಯನ್‌ಶಿಪ್‌ ಸ್ಟೇಕ್ಸ್‌ನಲ್ಲಿ 'ವಾರ್ ಹ್ಯಾಮರ್'ಗೆ ನೇರ ಅಂತರದಲ್ಲಿ ಸೋತಿದೆ. 'ಫಿಲ್ಲೀಸ್ ಚಾಂಪಿಯನ್‌ಶಿಪ್‌ ಸ್ಟೇಕ್ಸ್'ನಲ್ಲಿ ನಿರಾಯಾಸ ಗೆಲುವು ಸೇರಿದಂತೆ 'ವೆಲ್ ಕನೆಕ್ಟೆಡ್' ತನ್ನ ಎರಡೂ ಓಟಗಳನ್ನೂ ಗೆದ್ದಿದ್ದು ಬುಕ್‌ ಮೇಕರ್ಸ್ ಲೆಕ್ಕಾಚಾರದಲ್ಲಿ ಈ ಡರ್ಬಿ ಗೆಲ್ಲುವ ನೆಚ್ಚಿನ ಕುದುರೆ ಎನಿಸಿದೆ. ಆದರೆ, ಈ ಹೆಣ್ಣು ಕುದುರೆಗೆ, ಉತ್ತಮ ಫಾರಂನಲ್ಲಿರುವ ನುರಿತ ಗಂಡು ಕುದುರೆ 'ಇಂಪಾವಿಡ್' ಸೋಲಿಸಲು ಅನುಭವದ ಕೊರತೆ ಕಾರಣವಾಗಬಹುದು. ಆದ್ದರಿಂದ, ಈ ಡರ್ಬಿ ರೇಸ್‌ನಲ್ಲಿ 'ಇಂಪಾವಿಡ್' ತುಸು ಹೆಚ್ಚಿನ ಸಾಧ್ಯತೆ ಹೊಂದಿದ್ದರೂ, ಇವೆರಡರ ನಡುವಿನ ಪೈಪೋಟಿ ರೇಸ್‌ ಪ್ರಿಯರ ಕುತೂಹಲ ಕೆರಳಿಸಿದೆ.

ಉಳಿದ ಸ್ಥಾನಗಳಿಗಾಗಿ ’ನೈಟ್‌ ಟೆಂಪ್ಲರ್‌’, ’ಅಂಜೀಜ್‌’,’ಕಾಸ್ಮಿಕ್‌ ರೇ’ ಮತ್ತು ’ಹಂಟ್‌ ಫಾರ್‌ ಗೋಲ್ಡ್‌’ ಪೈಪೋಟಿ ನಡೆಸುವ ಸಾಧ್ಯತೆಗಳಿವೆ.

ಬೇಸಿಗೆ ಡರ್ಬಿ ರೇಸ್ ಪ್ರಮುಖ ಅಂಶಗಳು

*ಯುನೈಟೆಡ್‌ ಬ್ರೂವರೀಸ್ ಸಂಸ್ಥೆಯು ಸತತವಾಗಿ 32ನೇ ಬಾರಿಗೆ ಬೆಂಗಳೂರು ಬೇಸಿಗೆ ಡರ್ಬಿ ರೇಸ್ ಅನ್ನು ಪ್ರಾಯೋಜಿಸುತ್ತಿದೆ.

*ಯುನೈಟೆಡ್ ಬ್ರೂವರೀಸ್ ಮುಂಬೈನಲ್ಲಿ ಆಯೋಜಿಸುವ ಇಂಡಿಯನ್ ಡರ್ಬಿ ದೇಶದ ಶ್ರೀಮಂತ ರೇಸ್ ಆಗಿದೆ. ಬೆಂಗಳೂರು ಡರ್ಬಿ ಎರಡನೇ ಶ್ರೀಮಂತ ರೇಸ್ ಎನಿಸಿಕೊಂಡಿದೆ.

*ಕಿಂಗ್‌ಫಿಷರ್‌ ಅಲ್ಟ್ರಾ ಡರ್ಬಿಯಲ್ಲಿ ಈ ಬಾರಿ ದಾಖಲೆಯ ಬಹುಮಾನ ಮೊತ್ತ ಸುಮಾರು ₹ 2.55 ಕೋಟಿಯನ್ನು ನೀಡಲಾಗುತ್ತಿದೆ.

*ಗೆಲ್ಲುವ ಕುದುರೆಯು ಸುಮಾರು ₹ 1.51 ಕೋಟಿಗೂ ಹೆಚ್ಚಿನ ಮೊತ್ತದ ಮೊದಲನೇ ಬಹುಮಾನದೊಂದಿಗೆ ಸುಮಾರು ₹ 3 ಲಕ್ಷ ಮೌಲ್ಯದ ಸುಂದರ ಟ್ರೋಫಿಯನ್ನು ತನ್ನ ಮಾಲೀಕರಿಗೆ ದೊರಕಿಸಿಕೊಡಲಿದೆ.

*ಬಿಟಿಸಿ ವೆಬ್‌ಸೈಟ್‌ನಲ್ಲಿ ದಿನದ ರೇಸ್‌ಗಳ ನೇರ ಪ್ರಸಾರವನ್ನು ಉಚಿತವಾಗಿ ವೀಕ್ಷಿಸಬಹು ದಾಗಿದೆ. ಯೂ ಟ್ಯೂಬ್‌ನಲ್ಲೂ ಪ್ರಸಾರವನ್ನು ವೀಕ್ಷಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT