ನವದೆಹಲಿ: ಭಾರತದ ಅಗ್ರ ಬ್ಯಾಡ್ಮಿಂಟನ್ ಆಟಗಾರ ಲಕ್ಷ್ಯ ಸೇನ್ ಅವರು ಮುಂಬರುವ ಬಿಡಬ್ಲ್ಯುಎಫ್ ಟೂರ್ನಿಗಳಲ್ಲಿ ಆಡಲಿದ್ದಾರೆ. ಅದಕ್ಕಾಗಿ ದೈಹಿಕ ಸಾಮರ್ಥ್ಯ ಮೌಲ್ಯಮಾಪನಕ್ಕಾಗಿ ಭಾನುವಾರ ಆಸ್ಟ್ರಿಯಾಕ್ಕೆ ತೆರಳಿದ್ದಾರೆ.

ಪ್ಯಾರಿಸ್‌ನಲ್ಲಿ ಒಲಿಂಪಿಕ್ ಪದಕವನ್ನು ಗೆಲ್ಲುವ ಸಮೀಪ ಬಂದಿದ್ದ ಸೇನ್ ಅಂತಿಮವಾಗಿ ನಾಲ್ಕನೇ ಸ್ಥಾನ ಪಡೆದಿದ್ದರು. ತಮ್ಮ ಫಿಟ್‌ನೆಸ್ ಮಟ್ಟ ಹೆಚ್ಚಿಸಿಕೊಳ್ಳಲು ವಿವರವಾದ ಪರೀಕ್ಷೆಗಾಗಿ ಸಾಲ್ಜ್‌ಬರ್ಗ್‌ನ ರೆಡ್ ಬುಲ್ ಅಥ್ಲೀಟ್ ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ಸರಣಿ ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ.

‘ಲಕ್ಷ್ಯ ಕೆಲವು ದೈಹಿಕ ಪರೀಕ್ಷೆಗಳಿಗಾಗಿ ಆಸ್ಟ್ರಿಯಾಕ್ಕೆ ಹೋಗುತ್ತಿದ್ದಾರೆ. ಅಲ್ಲಿನ ಉತ್ತಮ ಕ್ರೀಡಾಸಂಸ್ಥೆಯಲ್ಲಿ ಅವರು ಸ್ವಲ್ಪ ದೈಹಿಕ ಕಸರತ್ತು ಮಾಡಲು ಬಯಸಿದ್ದಾರೆ. ಒಂದು ವಾರದ ನಂತರ ಹಿಂತಿರುಗುತ್ತಾರೆ’ ಎಂದು ವಿಮಲ್ ಕುಮಾರ್ ತಿಳಿಸಿದರು.

ಸೆಪ್ಟೆಂಬರ್ ಅಂತ್ಯದಲ್ಲಿ ಹಾಂಗ್‌ಕಾಂಗ್ ಸೂಪರ್ 500 ಮತ್ತು ಚೀನಾ ಓಪನ್ ಸೂಪರ್ 1000 ಟೂರ್ನಿಯಲ್ಲಿ ಲಕ್ಷ್ಯ ಅವರು ಆಡುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.