ಬುಡಾಪೆಸ್ಟ್: ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ ಪ್ರಶಸ್ತಿಯನ್ನು ಚೀನಾದ ಮಾ ಲಾಂಗ್ತಮ್ಮದಾಗಿಸಿಕೊಂಡರು.

‘ಡ್ರಾಗನ್’ ಎಂದೇ ಕರೆಯಲ್ಪಡುವ ಡಾ ಲಾಂಗ್ ಅವರಿಗೆ ಇದು ಮೂರನೇ ಚಾಂಪಿಯನ್ಷಿಪ್ ಪ್ರಶಸ್ತಿಯಾಗಿದೆ. ಕಾಲಿನ ಸ್ನಾಯು ಸೆಳೆತದಿಂದ ಬಳಲಿದ್ದ ಲಾಂಗ್ ಈ ವರ್ಷದ ಆರಂಭದಲ್ಲಿ ಚೇತರಿಸಿಕೊಂಡು ಕಣಕ್ಕಿಳಿದ್ದರು.

ಭಾನುವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಸಿಟ್ಜರ್ಲೆಂಡ್ನ ಮಾಥಾಯ್ಸ್ ಫಾಲ್ಕ್ ಅವರನ್ನು4-1 (11-5, 11-7, 7-11, 11-9, 11-7)ರಿಂದ ಮಣಿಸಿದರು. ಆರಂಭದಿಂದಲೂ ಹಿಡಿತ ಸಾಧಿಸಿದ ಲಾಂಗ್ ತಮ್ಮ ವೇಗದ ಆಟದ ಮೂಲಕ ಗಮನ ಸೆಳೆದರು. ಲೂಪ್, ಫ್ಲಿಪ್, ಸ್ಮಾಷ್ ಡ್ರೈವ್ಗಳಿಂದ ಎದುರಾಳಿಯನ್ನು ಕಂಗೆಡೆಸಿದರು.

ಮಹಿಳೆಯರ ಸಿಂಗಲ್ಸ್ನಲ್ಲಿ ಚೀನಾದ ಲಿಯು ಶಿವೆನ್ ಅವರು ತಮ್ಮ ದೇಶದವರೇ ಆದ ಚೆನ್ ಮೆಂಗ್ ವಿರುದ್ಧ 4–2ರಲ್ಲಿ ಗೆದ್ದರು.

ಈ ಟೂರ್ನಿಯಲ್ಲಿ ಭಾರತದ ಸತ್ಯನ್ ಜ್ಞಾನಶೇಖರನ್ ಚಾಂಪಿಯನ್ಷಿಪ್ನ 32ರ ಘಟ್ಟದಲ್ಲಿ ಸೋತು ಹೊರ ನಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.