ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಖೇಲೊ ಇಂಡಿಯಾ: ಪದಕ ಪಟ್ಟಿಯಲ್ಲಿ ಕರ್ನಾಟಕಕ್ಕೆ ಎರಡನೇ ಸ್ಥಾನ

Published 6 ಫೆಬ್ರುವರಿ 2024, 18:32 IST
Last Updated 6 ಫೆಬ್ರುವರಿ 2024, 18:32 IST
ಅಕ್ಷರ ಗಾತ್ರ

ಲೇಹ್‌, ಲಡಾಖ್‌ (ಪಿಟಿಐ): ಮಂಗಳವಾರ ಮುಕ್ತಾಯಗೊಂಡ ಖೇಲೊ ಇಂಡಿಯಾ ಚಳಿಗಾಲದ ಕ್ರೀಡೆಗಳ ಮೊದಲ ಭಾಗದಲ್ಲಿ ಕರ್ನಾಟಕ ತಂಡವು ಪದಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದೆ. ಮಹಾರಾಷ್ಟ್ರ ತಂಡ ಅಗ್ರಸ್ಥಾನದಲ್ಲಿದೆ.

ಮಹಾರಾಷ್ಟ್ರವು 6 ಚಿನ್ನದೊಂದಿಗೆ ಒಟ್ಟು 20 ಪದಕ ಗೆದಿದ್ದರೆ, ಕರ್ನಾಟಕ ತಂಡವು ಆರು ಚಿನ್ನದೊಂದಿಗೆ ಒಟ್ಟು ಎಂಟು ಪದಕ ಜಯಿಸಿದೆ. ಸ್ಪೀಡ್ ಸ್ಕೇಟಿಂಗ್‌ನಲ್ಲಿ ಐತಿಹಾಸಿಕ ಚಿನ್ನ ಪದಕಗಳನ್ನು ಗೆದ್ದ ಆತಿಥೇಯ ಲಡಾಖ್ 13 ಪದಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಖೇಲೊ ಇಂಡಿಯಾ ಚಳಿಗಾಲದ ಕ್ರೀಡೆಗಳ ಎರಡನೇ ಭಾಗವು ಇದೇ 21ರಿಂದ 25ರವರೆಗೆ ಜಮ್ಮುಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ನಡೆಯಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT