ಪ್ರಣಯ್ ಪಂದ್ಯ ಸ್ಥಗಿತ:
ಭಾರತದ ತಾರೆ ಎಚ್.ಎಸ್. ಪ್ರಣಯ್ ಅವರ ಪಂದ್ಯ ನಡೆಯುತ್ತಿದ್ದ ಕೋರ್ಟ್‌ನ ಒಳಾಂಗಣದ ಚಾವಣಿಯಲ್ಲಿ ಮಳೆನೀರು ಸೋರಿಕೆಯಾದ ಕಾರಣ ಸ್ಪರ್ಧೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿ, ಬುಧವಾರಕ್ಕೆ ಮುಂದೂಡಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಕಣಕ್ಕೆ ಇಳಿದಿರುವ ಪ್ರಣಯ್ ಅವರಿಗೆ ಆರಂಭಿಕ ಸುತ್ತಿನಲ್ಲಿ ಕೆನಡಾದ ಬ್ರೈನ್ ಯಂಗ್ ಎದುರಾಳಿಯಾಗಿದ್ದರು. ಮೊದಲ ಗೇಮ್‌ನಲ್ಲಿ 21–12ರಿಂದ ಮೇಲುಗೈ ಸಾಧಿಸಿದ್ದ ಭಾರತದ ಆಟಗಾರ, ಎರಡನೇ ಗೇಮ್‌ನಲ್ಲಿ 3–6 ಸ್ಕೋರ್ ಆಗಿದ್ದಾಗ ಚಾವಣಿಯಲ್ಲಿ ನೀರು ಸೋರಿಕೆ ಆರಂಭವಾಗಿದೆ.