ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಸ್ಕರ್‌, ಚಿತ್ರಾಗೆ ಪ್ರಶಸ್ತಿ

ಮೇಯರ್‌ ಕಪ್‌ ಸ್ನೂಕರ್‌ ಟೂರ್ನಿ: ಜೂಡಿ ವಾಲಿಯಾಗೆ ನಿರಾಸೆ
Last Updated 22 ಸೆಪ್ಟೆಂಬರ್ 2018, 19:59 IST
ಅಕ್ಷರ ಗಾತ್ರ

ಬೆಂಗಳೂರು: ಅಮೋಘ ಆಟ ಆಡಿದ ಬಿ.ಭಾಸ್ಕರ್‌ ಮತ್ತು ಚಿತ್ರಾ ಮಗಿಮೈರಾಜ್‌ ಅವರು ಕರ್ನಾಟಕ ರಾಜ್ಯ ಬಿಲಿಯರ್ಡ್ಸ್‌ ಸಂಸ್ಥೆ (ಕೆಎಸ್‌ಬಿಎ) ಆಶ್ರಯದ ಮೇಯರ್‌ ಕಪ್‌ ಸ್ನೂಕರ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.

ಕೆಎಸ್‌ಬಿಎ ಕೊಠಡಿಯಲ್ಲಿ ಶನಿವಾರ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ಭಾಸ್ಕರ್‌ 81–00, 16–59, 53–15, 91–00, 70–40, 56–47ರಿಂದ ಆರ್‌.ಸಂತೋಷ್‌ ಅವರನ್ನು ಪರಾಭವಗೊಳಿಸಿದರು.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಆಡಿದ ಅನುಭವ ಹೊಂದಿರುವ ಭಾಸ್ಕರ್‌ ಮೊದಲ ಫ್ರೇಮ್‌ನಲ್ಲಿ ನಿರಾಯಾಸವಾಗಿ ಗೆದ್ದರು. ಆದರೆ ಎರಡನೇ ಫ್ರೇಮ್‌ನಲ್ಲಿ ತಿರುಗೇಟು ನೀಡಿದ ಸಂತೋಷ್‌ 1–1ರಲ್ಲಿ ಸಮಬಲ ಮಾಡಿಕೊಂಡರು.

ಇದರಿಂದ ಭಾಸ್ಕರ್‌ ವಿಚಲಿತರಾಗಲಿಲ್ಲ. ಮೂರು ಮತ್ತು ನಾಲ್ಕನೇ ಫ್ರೇಮ್‌ಗಳಲ್ಲಿ ಮಿಂಚಿನ ಆಟ ಆಡಿದ ಅವರು 3–1ರ ಮುನ್ನಡೆ ಗಳಿಸಿ ಗೆಲುವಿನ ಹಾದಿ ಸುಗಮ ಮಾಡಿಕೊಂಡರು. ಕೊನೆಯ ಎರಡು ಫ್ರೇಮ್‌ಗಳಲ್ಲೂ ಭಾಸ್ಕರ್‌ ಮೋಡಿ ಮಾಡಿದರು.

ಮಹಿಳೆಯರ ವಿಭಾಗದ ಪ್ರಶಸ್ತಿ ಸುತ್ತಿನ ಪೈಪೋಟಿಯಲ್ಲಿ ಚಿತ್ರಾ 66–30, 56–26, 55–16, 57–04ರಲ್ಲಿ ಜೂಡಿ ವಾಲಿಯಾ ವಿರುದ್ಧ ಗೆದ್ದರು.

ಚಿತ್ರಾ ಆರಂಭದಿಂದಲೇ ಆಕ್ರಮಣಕಾರಿ ಆಟ ಆಡಿದರು. ಅಮೋಘ ಬ್ರೇಕ್‌ಗಳ ಮೂಲಕ ಪಾಯಿಂಟ್ಸ್‌ ಕಲೆಹಾಕಿದ ಅವರು ಮೊದಲ ಎರಡು ಫ್ರೇಮ್‌ಗಳನ್ನು ಗೆದ್ದು 2–0ರ ಮುನ್ನಡೆ ಗಳಿಸಿದರು.

ಮೂರನೇ ಫ್ರೇಮ್‌ನಲ್ಲಿ ಜೂಡಿ ತಿರುಗೇಟು ನೀಡಬಹುದೆಂಬ ನಿರೀಕ್ಷೆ ಹುಸಿಯಾಯಿತು. ನಾಲ್ಕನೇ ಫ್ರೇಮ್‌ನಲ್ಲೂ ಆಧಿಪತ್ಯ ಸಾಧಿಸಿದ ಚಿತ್ರಾ ಖುಷಿಯ ಕಡಲಲ್ಲಿ ತೇಲಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT