ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿಶ್ವ ಮಹಿಳಾ ಬಾಕ್ಸಿಂಗ್‌: ಮೇರಿ ಕೋಮ್‌, ಫರ್ಹಾನ್ ಅಖ್ತರ್ ಪ್ರಚಾರ ರಾಯಭಾರಿ

Published : 13 ಮಾರ್ಚ್ 2023, 23:36 IST
ಫಾಲೋ ಮಾಡಿ
Comments

ನವದೆಹಲಿ: ದಿಗ್ಗಜ ಬಾಕ್ಸರ್ ಮೇರಿ ಕೋಮ್‌ ಮತ್ತು ಬಾಲಿವುಡ್‌ ನಟ ಫರ್ಹಾನ್ ಅಖ್ತರ್ ಅವರನ್ನು ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಪ್ರಚಾರ ರಾಯಭಾರಿಗಳನ್ನಾಗಿ ನೇಮಿಸಲಾಗಿದೆ.

ಮಾರ್ಚ್‌ 15ರಿಂದ 26ರವರೆಗೆ ಇಲ್ಲಿಯ ಇಂದಿರಾ ಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಚಾಂಪಿಯನ್‌ಷಿಪ್ ಆಯೋಜನೆಯಾಗಿದೆ. ಮಹಿಳಾ ವಿಶ್ವ ಚಾಂಪಿಯನ್‌ಷಿಪ್‌ಗೆ ಭಾರತ ಮೂರನೇ ಬಾರಿ ಆತಿಥ್ಯ ವಹಿಸಲಿದೆ.

ಮಹಿಂದ್ರಾ ಆ್ಯಂಡ್‌ ಮಹಿಂದ್ರಾ ಕಂಪನಿಯು ಚಾಂಪಿಯನ್‌ಷಿಪ್‌ನ ಟೈಟಲ್ ಪ್ರಾಯೋಜಕತ್ವ ವಹಿಸಿ ಕೊಂಡಿದೆ ಎಂದು ಭಾರತ ಬಾಕ್ಸಿಂಗ್ ಫೆಡರೇಷನ್ ಅಧ್ಯಕ್ಷ ಅಜಯ್ ಸಿಂಘಾನಿಯಾ ತಿಳಿಸಿದ್ದಾರೆ. 74 ದೇಶಗಳ 350ಕ್ಕೂ ಹೆಚ್ಚು ಬಾಕ್ಸರ್‌ಗಳು ಇಲ್ಲಿಯವರೆಗೆ ಚಾಂಪಿಯನ್‌ಷಿಪ್‌ಗೆ ನೋಂದಾಯಿಸಿಕೊಂಡಿದ್ದಾರೆ.

ಸಿಗದ ವೀಸಾ; ಕೊಸೊವೊ ಬಾಕ್ಸರ್ ಅಸಮಾಧಾನ: ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಬೇಕಿದ್ದ ಕೊಸೊವೊದ ಬಾಕ್ಸರ್ ದೊಂಜೆತಾ ಸದಿಕು ಅವರಿಗೆ ವೀಸಾ ದೊರೆತಿಲ್ಲ. ಇದರಿಂದಾಗಿ ಅಸಮಾಧಾನಗೊಂಡಿರುವ ಅವರು ಭಾರತಕ್ಕೆ ಆತಿಥ್ಯದ ಹಕ್ಕು ನೀಡಿದ ಅಂತರರಾಷ್ಟ್ರೀಯ ಬಾಕ್ಸಿಂಗ್‌ ಫೆಡ ರೇಷನ್‌ ನಿರ್ಧಾರವನ್ನು ಪ್ರಶ್ನಿಸಿದ್ದಾರೆ.

ಆಗ್ನೇಯ ಯೂರೋಪ್‌ನ ಕೊಸೊವೊ ಪ್ರಾಂತ್ಯವು ವಿವಾದದಲ್ಲಿದೆ. ಹೀಗಾಗಿ ಭಾರತ ಅದಕ್ಕೆ ಮಾನ್ಯತೆ ನೀಡಿಲ್ಲ.

‘ಭಾರತದಿಂದ ನನಗೆ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಭಾರತ ಬಾಕ್ಸಿಂಗ್ ಫೆಡರೇಷನ್‌ ಅನುಮತಿ ನೀಡಿದೆ. ಆದರೆ ಭಾರತ ಸರ್ಕಾರ ಮತ್ತು ಕ್ರೀಡಾ ಸಚಿವಾಲಯಗಳು ನನ್ನ ವೀಸಾ ಅರ್ಜಿಗೆ ಪ್ರತಿಕ್ರಿಯಿಸಿಲ್ಲ‘ ಎಂದು ಸದಿಕು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT