ಸಿಂಗಪುರ: ಕೆನಡಾದ ಹದಿಹರೆಯದ ಈಜು ತಾರೆ ಸಮ್ಮರ್ ಮೆಕಿಂಟೋಷ್ ಎದುರಾಳಿಗಳನ್ನು ಆರಾಮವಾಗಿ ಹಿಂದೆಹಾಕಿ ವಿಶ್ವ ಈಜು ಚಾಂಪಿಯನ್ಷಿಪ್ನ ಮಹಿಳೆಯರ 400 ಮೀಟರ್ ಫ್ರೀಸ್ಟೈಲ್ ಚಿನ್ನ ಗೆದ್ದರು. ಅಮೆರಿಕದ ದಿಗ್ಗಜ ಈಜುಗಾರ್ತಿ ಕೇಟಿ ಲೆಡೆಕಿ ಮೂರನೇ ಸ್ಥಾನಕ್ಕೆ ಸರಿದರು.

ಭಾನುವಾರ ನಡೆದ ಈ ಸ್ಪರ್ಧೆಯಲ್ಲಿ, 18 ವರ್ಷ ವಯಸ್ಸಿನ ಮೆಕಿಂಟೋಷ್ 3ನಿಮಿಷ 56.26 ಸೆಕೆಂಡುಗಳಲ್ಲಿ ಸ್ಪರ್ಧೆಯನ್ನು ಮುಗಿಸಿದರು. ಚೀನಾದ ಲೀ ಬಿಂಗ್ಜೀ ಅವರನ್ನು ಎರಡು ಸೆಕೆಂಡುಗಳ ಅಂತರದಿಂದ ಹಿಂದೆಹಾಕಿದರು. ಲೆಡಕಿ ಕಂಚಿನ ಪಕದ ಪಡೆದರು. ವಿಶ್ವ ದಾಖಲೆ ಹೊಂದಿರುವ ಸಮ್ಮರ್ ಅವರಿಗೆ ಇದು ಮೊದಲ ವಿಶ್ವ ಚಾಂಪಿಯನ್ಷಿಪ್ ಚಿನ್ನ. ಅವರು ಇಲ್ಲಿ ಐದು ಚಿನ್ನಗಳನ್ನು ಗೆಲ್ಲುವ ಗುರಿಹೊಂದಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್ನಲ್ಲೂ ಮೆಕಿಂಟೋಷ್ ಮತ್ತು ಲೆಡೆಕಿ ಪೈಪೋಟಿ ಜೋರಾಗಿಯೇ ನಡೆದಿತ್ತು. ಈ ಕೂಟದಲ್ಲಿ ಅದು ಮುಂದುವರಿಯುತ್ತಿದೆ. ಇವರಿಬ್ಬರೂ 800 ಮೀ. ಫ್ರೀಸ್ಟೈಲ್ನಲ್ಲೂ ಕಣಕ್ಕಿಳಿಯುತ್ತಿದ್ದು, ಈ ಸ್ಪರ್ಧೆ ‘ರೇಸ್ ಆಫ್ ದಿ ಚಾಂಪಿಯನ್ಷಿಪ್’ ಎಂದು ಕರೆಯಲಾಗಿದೆ.

ಆರಂಭದಲ್ಲೇ ಮುನ್ನಡೆ ಪಡೆದ ಮೆಕಿಂಟೋಷ್ ನಂತರ ಹಿಂತಿರುಗಿ ನೋಡಲಿಲ್ಲ. ಎದುರಾಳಿಗಳನ್ನು ನಿರಾಯಾಸವಾಗಿ ಹಿಂದೆಹಾಕಿ ತಮ್ಮ ಅಂತರ ಹೆಚ್ಚಿಸುತ್ತ ಹೋದರು. ಉತ್ತಮ ಲಯದೊಡನೆ ಅವರು ಈ ಕೂಟಕ್ಕೆ ಆಗಮಿಸಿದ್ದಾರೆ. ಜೂನ್ನಲ್ಲಿ ಅವರು ಕೆನಡಿಯನ್ ಟ್ರಯಲ್ಸ್ನಲ್ಲಿ 400 ಮೀ. ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ವಿಶ್ವದಾಖಲೆ (3:54.18) ಸ್ಥಾಪಿಸಿದ್ದರು.

ಒಲಿಂಪಿಕ್ ಚಾಂಪಿಯನ್, ಆಸ್ಟ್ರೇಲಿಯಾದ ಅರಿಯರ್ನ್ ಟಿಟ್ಮಸ್ ಅವರು 2028ರ ಲಾಸ್ ಏಂಜಲಿಸ್ ಒಲಿಂಪಿಕ್ಸ್ಗೆ ಸಿದ್ಧತೆ ನಡೆಸುವ ಉದ್ದೇಶದಿಂದ ಸಿಂಗಪುರಕ್ಕೆ ಬಂದಿಲ್ಲ.

ಮೆಕಿಂಟೋಷ್ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 200 ಮೀ. ಬಟರ್ಫ್ಲೈ, 200 ಮೀ. ಮೆಡ್ಲೆ ಮತ್ತು 400 ಮೀ. ಮೆಡ್ಲೆಯಲ್ಲಿ ಚಿನ್ನ ಗೆದ್ದಿದ್ದರು. 400 ಮೀ. ಫ್ರೀಸ್ಟೈಲ್ನಲ್ಲಿ ಬೆಳ್ಳಿ ಪದಕವನ್ನೂ ಗಳಿಸಿದ್ದರು.

ನಿರಾಸೆಗೊಳಿಸದ ಯು ಝಿದಿ:

ವಿಶ್ವ ಈಜು ರಂಗದಲ್ಲಿ ಪದಾರ್ಪಣೆ ಮಾಡಿದ ಚೀನಾದ 12 ವರ್ಷ ವಯಸ್ಸಿನ ಈಜು ಪ್ರತಿಭೆ ಯು ಝಿದಿ ನಿರಾಸೆ ಮೂಡಿಸಲಿಲ್ಲ. ಅವರು ಮೊದಲ ದಿನ 200 ಮೀ. ವೈಯಕ್ತಿಕ ಮೆಡ್ಲೆಯಲ್ಲಿ 2ನಿ.11.90 ಸೆ.ಗಳ ಅವಧಿಯೊಡನೆ ಗುರಿಮುಟ್ಟಿ ಸೆಮಿಫೈನಲ್ ತಲುಪಿದರು. ಅರ್ಹತೆ ಪಡೆದ 16 ಮಂದಿಯಲ್ಲಿ ಅವರ ತೆಗೆದುಕೊಂಡ ಸಮಯ 15ನೇ ಉತ್ತಮ ಎನಿಸಿತು.

ಆದರೆ ಅವರ ವರ್ಷದ ಅತ್ಯುತ್ತಮ ಅವಧಿ (2:10.63) ಇದಕ್ಕಿಂತ ಉತ್ತಮವಾಗಿದೆ.

ಯು ಈ ಕೂಟದಲ್ಲಿ 400 ಮೀ. ವೈಯಕ್ತಿಕ ಮೆಡ್ಲೆ ಮತ್ತು 200 ಮೀ. ಬಟರ್ಫ್ಲೈನಲ್ಲೂ ಕಣಕ್ಕಿಳಿಯುತ್ತಿದ್ದಾರೆ. 200 ಮೀ. ಮೆಡ್ಲೆ ಸ್ಪರ್ಧೆ ಅವರಿಗೆ ಈ ಮೂರರಲ್ಲಿ ಕಡಿಮೆ ಮೆಚ್ಚಿನದ್ದು.

ವಿಶ್ವ ಅಕ್ವೆಟಿಕ್ಸ್, ವಿಶ್ವ ಚಾಂಪಿಯನ್ಷಿಪ್ಗೆ ವಯೋಮಿತಿಯನ್ನು 14ಕ್ಕೆ ನಿಗದಿಪಡಿಸಿದೆ. ಆದರೆ ಅರ್ಹತಾ ಮಟ್ಟ ದಾಟಿದಲ್ಲಿ ಅದಕ್ಕಿಂತ ಕೆಳ ವಯಸ್ಸಿನ ಈಜುಪಟುಗಳಿಗೂ ಪಾಲ್ಗೊಳ್ಳಲು ಅವಕಾಶವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.