ನವದೆಹಲಿ: ಒಲಿಂಪಿಯನ್ ವೇಟ್ಲಿಫ್ಟರ್ ಮಿರಾಬಾಯಿ ಚಾನು ಅವರು ಮುಂದಿನ ವಾರ ಮನಾಮದಲ್ಲಿ ನಡೆಯಲಿರುವ ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ಸ್ಪರ್ಧಿಸುತ್ತಿಲ್ಲ. ಅವರು ತಮ್ಮ ಗಾಯಕ್ಕೆ ಆರೈಕೆ ಪಡೆಯುತ್ತಿರುವುದರಿಂದ ವಿಶ್ವ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ.

ಕಳೆದ ಆಗಸ್ಟ್ನಲ್ಲಿ ಮೀರಾಬಾಯಿ ಅವರು ಪ್ಯಾರಿಸ್ ಒಲಿಂಪಿಕ್ ಕೂಟದಲ್ಲಿ ನಡೆದಿದ್ದ ಮಹಿಳೆಯರ 49 ಕೆ.ಜಿ. ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು. ಅದರ ನಂತರ ಅವರು ಬೇರೆ ಯಾವುದೇ ಸ್ಪರ್ಧೆಗಳಲ್ಲಿಯೂ ಭಾಗವಹಿಸಿಲ್ಲ.

‘ಪ್ಯಾರಿಸ್ ಒಲಿಂಪಿಕ್ಸ್ ನಂತರ ಮೀರಾ ಅವರು ಗಾಯದ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದಾರೆ. ಅದರಿಂದಾಗಿ ಅವರು ವಿಶ್ವ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸುತ್ತಿಲ್ಲ’ ಎಂದು ರಾಷ್ಟ್ರೀಯ ಮುಖ್ಯ ಕೋಚ್ ವಿಜಯ್ ಶರ್ಮಾ ತಿಳಿಸಿದ್ದಾರೆ.

ಮೀರಾ ಅವರ ಗೈರು ಹಾಜರಿಯಲ್ಲಿ ಗ್ಯಾನೇಶ್ವರಿ ಯಾದವ್ ಅವರು ವಿಶ್ವ ಚಾಂಪಿಯನ್ಷಿಪ್ನಲ್ಲಿ ಭಾರತ ತಂಡದ ನಾಯಕತ್ವ ವಹಿಸುವರು. 21 ವರ್ಷದ ಗ್ಯಾನೇಶ್ವರಿ 49 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. ಕಾಮನ್ವೆಲ್ತ್ ಕೂಟದ ಬೆಳ್ಳಿ ಪದಕ ವಿಜೇತೆ ಬಿಂದ್ಯಾರಾಣಿ ದೇವಿ (55 ಕೆ.ಜಿ) ಮತ್ತು ಖೇಲೋ ಇಂಡಿಯಾ ವೇಟ್ಲಿಫ್ಟಿಂಗ್ ಚಿನ್ನದ ಪದಕ ವಿಜೇತೆ ಡಿಟಿಮೋನಿ ಸೊನೊವಾಲ್ (64ಕೆಜಿ) ಕೂಡ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.