ಆರ್ಲಿಯನ್ಸ್, ಫ್ರಾನ್ಸ್: ಭಾರತದ ಮಿಥುನ್ ಮಂಜುನಾಥ್, ಕಿರಣ್ ಜಾರ್ಜ್ ಮತ್ತು ಮೀರಬ ಲುವಾಂಗ್ ಮೈಸ್ನಮ್ ಅವರು ಇಲ್ಲಿ ನಡೆಯುತ್ತಿರುವ ಆರ್ಲಿಯನ್ಸ್ ಮಾಸ್ಟರ್ಸ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿಯ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಗುರುವಾರ ನಡೆದ ಪಂದ್ಯದಲ್ಲಿ ಕರ್ನಾಟಕದ ಮಿಥುನ್ ಮಂಜುನಾಥ್ 21-14, 21-10ರಲ್ಲಿ ಸಿದ್ಧಾರ್ಥ್ ಪ್ರತಾಪ್ ಸಿಂಗ್ ಅವರನ್ನು ಮಣಿಸಿದರು. ಜಾರ್ಜ್ ಮೂರನೇ ಶ್ರೇಯಾಂಕಿತ ನೆದರ್ಲೆಂಡ್ಸ್ ಆಟಗಾರ ಮಾರ್ಕ್ ಕಲ್ಜೊ ಎದುರು 19-21, 21-16, 23-21ರಲ್ಲಿ ಜಯ ಗಳಿಸಿದರು. ಎಂಟನೇ ಶ್ರೇಯಾಂಕದ ತೊಬಿ ಪೆಂಟಿ ಅವರನ್ನು ಮೀರಬ ಗೆದ್ದರು. ಇಂಗ್ಲೆಂಡ್ ಆಟಗಾರನನ್ನು ಮೀರಬ 21-16, 21-16ರಲ್ಲಿ ಮಣಿಸಿದರು.

ಜನವರಿಯಲ್ಲಿ ಒಡಿಶಾ ಸೂಪರ್ 100 ಟೂರ್ನಿಯ ಪ್ರಶಸ್ತಿ ಗೆದ್ದಿರುವ ಜಾರ್ಜ್ 16ರ ಘಟ್ಟದ ಪಂದ್ಯದಲ್ಲಿ ಇಂಡೊನೇಷ್ಯಾದ ಕ್ರಿಸ್ಟಿಯನ್ ಆದಿನಾಥ ಅವರನ್ನು, ಮೀರಬ ಹಾಂಗ್‌ಕಾಂಗ್‌ನ ಚಾನ್ ಯಿನ್ ಚಾಕ್ ಅವರನ್ನು ಮತ್ತು ಮಂಜುನಾಥ್ ಎರಡನೇ ಶ್ರೇಯಾಂಕದ ಡೇನ್ ಹನ್ಸ್ ಕ್ರಿಸ್ಟಿಯನ್ ಅವರನ್ನು ಎದುರಿಸುವರು.

ಮಹಿಳೆಯರ ಡಬಲ್ಸ್‌ನಲ್ಲಿ ಭಾರತದ ಅಶ್ವಿನಿ ಭಟ್ ಮತ್ತು ಶಿಖಾ ಗೌತಮ್21-23 21-12 21-10ರಲ್ಲಿ ಡೆನ್ಮಾರ್ಕ್‌ನ ಅಮೆಲಿ ಶುಲ್ಸ್ ಮತ್ತು ಕ್ರಿಸ್ಟಿನ್ ಬೂಶ್ ಅವರನ್ನು ಮಣಿಸಿದರು. ಪುರುಷರ ಡಬಲ್ಸ್‌ನಲ್ಲಿ ಪಿ.ಎಸ್.ರವಿಕುಮಾರ್ ಮತ್ತು ಶಂಕರ್ ಪ್ರಸಾದ್ ಉದಯಕುಮಾರ್19-21, 21-11, 21-12ರಲ್ಲಿ ಜರ್ಮನ್‌ನ ಮರ್ವಿನ್ ಡಡ್ಕೊ ಮತ್ತು ಪ್ಯಾಟ್ರಿಕ್ ಶೀಲ್ ಎದುರು ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.