ಕೋಲ್ಕತ್ತಾ: ಮೋಹನ್ ಬಾಗನ್ ಸೂಪರ್ ಜೈಂಟ್ ತಂಡವು 133ನೇ ಡ್ಯುರಾಂಡ್ ಕಪ್ ಟೂರ್ನಿಯಲ್ಲಿ 6-0 ಅಂತರದಿಂದ ಇಂಡಿಯನ್ ಏರ್‌ಫೋರ್ಸ್ ಎಫ್‌ಟಿ ತಂಡವನ್ನು ಸೋಲಿಸಿ ಸಾಂಪ್ರದಾಯಿಕ ಎದುರಾಳಿ ಈಸ್ಟ್ ಬೆಂಗಾಲ್ ತಂಡ ಹಿಂದಿಕ್ಕಿ ‘ಎ’ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿತು.
ಮೋಹನ್ ಬಾಗನ್ ತಂಡದ ಜೇಸನ್ ಕಮ್ಮಿಂಗ್ಸ್ ಎರಡು ಹಾಗೂ ತಾಮ್ ಆಲ್ಡ್ರೆಡ್, ಲಿಸ್ಟನ್ ಕೊಲಾಕೊ, ಅನಿರುಧ್ ಥಾಪಾ, ಗ್ರೆಗ್ ಸ್ಟೇವಾರ್ಟ್ ತಲಾ ಒಂದು ಗೋಲು ದಾಖಲಿಸಿದರು.