ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋಟರ್ ರ‍್ಯಾಲಿ: ಮೂಸಾ ಷರೀಫ್ 300ರ ಮೈಲುಗಲ್ಲು

Last Updated 14 ಮಾರ್ಚ್ 2022, 16:29 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಏಳು ಬಾರಿ ಪ್ರಶಸ್ತಿ ಗೆದ್ದಿರುವ ಮೂಸಾ ಷರೀಫ್ ಅವರು ದೇಶದ ಮೋಟರ್ ರ‍್ಯಾಲಿಯಲ್ಲಿ ಅಪೂರ್ವ ಮೈಲುಗಲ್ಲು ಸ್ಥಾಪಿಸಿದರು.

ತುಮಕೂರು ಜಿಲ್ಲೆ ಗುಬ್ಬಿಯಲ್ಲಿ ಭಾನುವಾರ ಮುಕ್ತಾಯಗೊಂಡ ‘ಕರ್ನಾಟಕ 1000’ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದರೊಂದಿಗೆ ಸತತ 30 ವರ್ಷಗಳಲ್ಲಿ 300 ರ‍್ಯಾಲಿಗಳಲ್ಲಿ ಭಾಗಿಯಾದ ಸಾಧನೆ ಅವರದಾಯಿತು.

ಅಖಿಲ ಭಾರತ ರ‍್ಯಾಲಿ ಚಾಂಪಿಯನ್‌ಷಿಪ್‌ನ ಭಾಗವಾಗಿ ‘ಕರ್ನಾಟಕ 1000’ ಸ್ಪರ್ಧೆ ನಡೆದಿತ್ತು. 1993ರಲ್ಲಿ ದ್ವಿಚಕ್ರವಾಹನ ಚಾಲಕನಾಗಿ ಮೂಸಾ ವೃತ್ತಿಜೀವನ ಆರಂಭಿಸಿದ್ದರು. 50 ವರ್ಷ ವಯಸ್ಸಿನ ಅವರು 1995ರಲ್ಲಿ ನಾಲ್ಕು ಚಕ್ರಗಳ ವಾಹನ ಚಾಲನೆಗೆ ತೊಡಗಿದ್ದರು. ಕಾಸರಗೋಡು ಮೂಲದವರಾದ ಅವರು ಈ ವರೆಗೆ 50 ಚಾಲಕರ ಜೊತೆಗೂಡಿ ಸ್ಪರ್ಧಿಸಿದ್ದು 69 ಅಂತರರಾಷ್ಟ್ರೀಯ ರ‍್ಯಾಲಿಗಳಲ್ಲಿ ಪಾಲ್ಗೊಂಡಿದ್ದಾರೆ.

ಅವರ 300 ರ‍್ಯಾಲಿಗಳಲ್ಲಿ ದ್ವಿಚಕ್ರ ವಾಹನಗಳು ಮತ್ತು ಕಾರುಗಳು ಸೇರಿವೆ. ಎಲ್ಲ ಮಾದರಿಗಳಲ್ಲೂ ಅವರು ಸ್ಪರ್ಧಿಸಿದ್ದಾರೆ.

ಗೌರವ್ ಗಿಲ್ ಚಾಂಪಿಯನ್
ಬ್ರೇಕ್ ಫೇಲ್ ಒಳಗೊಂಡಂತೆ ಅನೇಕ ಸವಾಲುಗಳನ್ನು ಎದುರಿಸಿ ಮುನ್ನುಗ್ಗಿದ ಗೌರವ್ ಗಿಲ್ ಮತ್ತು ಸಹ ಚಾಲಕ ಮೂಸಾ ಷರೀಫ್ ‘ಕರ್ನಾಟಕ 1000’ದ ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಏಳು ಬಾರಿಯ ರಾಷ್ಟ್ರೀಯ ಚಾಂಪಿಯನ್ ಅಗಿರುವ ದೆಹಲಿ ಮೂಲದ ಗಿಲ್ ಅವರು ಮಹಿಂದ್ರಾ ಎಕ್ಸ್‌ಯುವಿ 300 ವಾಹನದಲ್ಲಿ ಸ್ಪರ್ಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT