ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌: ಕೂಟ ದಾಖಲೆ ಬರೆದ ಹಿತೈಷಿ, ನೈಶಾ

ಬಸವನಗುಡಿ ಮೇಲುಗೈ
Published 9 ಡಿಸೆಂಬರ್ 2023, 9:28 IST
Last Updated 9 ಡಿಸೆಂಬರ್ 2023, 9:28 IST
ಅಕ್ಷರ ಗಾತ್ರ

ಉಡುಪಿ: ಬೆಂಗಳೂರು ಡಾಲ್ಫಿನ್ ಅಕ್ವಾಟಿಕ್ಸ್‌ನ ನೈಶಾ ಶೆಟ್ಟಿ ಮತ್ತು ವಿಜಯ ನಗರ ಈಜು ಕೇಂದ್ರದ ಹಿತೈಷಿ, ಕರ್ನಾಟಕ ರಾಜ್ಯ ಈಜು ಸಂಸ್ಥೆ ಆಶ್ರಯದ ರಾಜ್ಯ ಶಾರ್ಟ್ ಕೋರ್ಸ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಶುಕ್ರವಾರ ದಾಖಲೆ ಬರೆದರು.

ಅಜ್ಜರಕಾಡು ಈಜುಕೊಳದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಶುಕ್ರವಾರವೂ ಬೆಂಗಳೂರಿನ ಬಸವನಗುಡಿ ಈಜು ಕೇಂದ್ರದ ಈಜುಪಟುಗಳು ಆಧಿಪತ್ಯ ಮುಂದುವರಿಸಿದರು.

ಮಹಿಳೆಯರ 100 ಮೀಟರ್ಸ್ ಬಟರ್‌ಫ್ಲೈಯಲ್ಲಿ ನೈಶಾ ಶೆಟ್ಟಿ 1 ನಿಮಿಷ 06.41 ಸೆಕೆಂಡುಗಳ ಸಾಧನೆಯೊಂದಿಗೆ ಕಳೆದ ವರ್ಷ ತಾವೇ ಬರೆದ ದಾಖಲೆಯನ್ನು ಉತ್ತಮಪಡಿಸಿಕೊಂಡರು. ಮಹಿಳೆಯರ 200 ಮೀಟರ್ಸ್ ಮೆಡ್ಲೆಯಲ್ಲಿ 2 ನಿಮಿಷ 30.53 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಹಿತೈಷಿ ಕಳೆದ ವರ್ಷ ನೈಶಾ ಶೆಟ್ಟಿ ಮಾಡಿದ್ದ ದಾಖಲೆಯನ್ನು ಮೀರಿದರು.

ಎರಡನೇ ದಿನದ ಫಲಿತಾಂಶಗಳು:

ಗುಂಪು–1, 100 ಮೀಟರ್ಸ್ ಬಟರ್‌ಫ್ಲೈ: ಬಾಲಕರು: ಚಿಂತನ್ ಎಸ್‌.ಶೆಟ್ಟಿ (ಮಂಗಳ ಸ್ವಿಮ್ಮಿಂಗ್ ಕ್ಲಬ್‌)–1, ಸ್ವರೂಪ್‌ ಧನುಚೆ (ಬಸವನಗುಡಿ ಈಜು ಕೇಂದ್ರ–ಬಿಎಸಿ)–2, ನಿರಂಜನ್‌ ಕಾರ್ತಿಕ್‌ (ಗ್ಲೋಬಲ್‌ ಈಜು ಕೇಂದ್ರ)–3. ಕಾಲ: 57.08 ಸೆ; ಬಾಲಕಿಯರು: ನೈಶಾ ಶೆಟ್ಟಿ (ಡಾಲ್ಫಿನ್‌ ಅಕ್ವಾಟಿಕ್ಸ್‌)–1, ಜನ್ಯಾ ಬಿ.ಎಸ್‌ (ಬಿಎಸಿ)–2, ಹಿತೈಷಿ ವಿ (ವಿಜಯನಗರ ಈಜುಕೇಂದ್ರ)–3. ಕಾಲ: 1 ನಿ 06.41 ಸೆ. (ಕೂಟ ದಾಖಲೆ: ಹಿಂದಿನ ದಾಖಲೆ: ನೈಶಾ ಶೆಟ್ಟಿ, 1:06.77; 2022); 50 ಮೀ ಬ್ಯಾಕ್‌ಸ್ಟ್ರೋಕ್‌: ಮಹಿಳೆಯರು: ಸಿದ್ಧಿ ಜಿ.ಶಾ (ಡಾಲ್ಫಿನ್ ಅಕ್ವಾಟಿಕ್ಸ್‌)–1, ಇಂಚರಾ ಫಣೀಂದ್ರನಾಥ್ (ಎಲೀಟ್‌ ಸ್ಪೋರ್ಟ್ಸ್‌ ಅಕಾಡೆಮಿ)–2, ಶ್ರುತಿ ಕೆ.ಆರ್‌ (ಗ್ಲೋಬಲ್‌ ಈಜುಕೇಂದ್ರ)–3. ಕಾಲ: 32.10; ಬಾಲಕರು: ಸ್ವರೂಪ್‌ ಧನುಚೆ (ಬಿಎಸಿ)–1, ಸೂರ್ಯ ಜೆ.ಟಿ (ಬಿಎಸಿ)–2, ರಾಘವ್ ಸ್ವಚ್ಛಂದಂ (ನೆಟ್ಟಕಲ್ಲಪ್ಪ ಈಜುಕೇಂದ್ರ)–3. ಕಾಲ: 28.65 ಸೆ; 200 ಮೀ ಮೆಡ್ಲೆ: ಮಹಿಳೆಯರು: ಹಿತೈಷಿ ವಿ (ವಿಜಯನಗರ ಈಜುಕೇಂದ್ರ)–1, ನೈಶಾ ಶೆಟ್ಟಿ (ಡಾಲ್ಫಿನ್ ಅಕ್ವಾಟಿಕ್ಸ್‌)–2, ಲಿಪಿಕಾ ದೇವ್‌ ಜಿ (ಸೌಂದರ್ಯ ಈಜುಕೇಂದ್ರ)–3. ಕಾಲ: 2 ನಿ 30.53ಸೆ (ಕೂಟ ದಾಖಲೆ: ಹಿಂದಿನ ದಾಖಲೆ: ನೈಶಾ ಶೆಟ್ಟಿ: 2ನಿ 30.73 ಸೆ, 2022); ಬಾಲಕರು: ಸೂರ್ಯ ಜೋಯಪ್ಪ (ಬಿಎಸಿ)–1, ಸಾಹಿಲ್ ದಲಾಲ್‌ (ಬಿಎಸಿ)–2, ಸೂರ್ಯ ಜೆ.ಟಿ (ಬಿಎಸಿ)–3. ಕಾಲ: 2 ನಿ 11.67ಸೆ.

ಗುಂಪು–2:

100 ಮೀ ಬಟರ್‌ಫ್ಲೈ, ಬಾಲಕರು: ಅನೀಶ್‌ ಅನಿರುದ್ಧ ಕೋರೆ (ನೆಟ್ಟಕಲ್ಲಪ್ಪ ಈಜುಕೇಂದ್ರ, ಬೆಂಗಳೂರು)–1, ದಕ್ಷ್ ಮಟ್ಟ (ಬಿಎಸಿ)–2, ಸಮರ್ಥ್ ಗೌಡ (ಬಿಎಸಿ)–3. ಕಾಲ: 59.88 ಸೆ; ಬಾಲಕಿಯರು: ಅಂಜಲಿ ಹೊಸಕೆರೆ (ಬಿಎಸಿ)–1, ತನಿಷಾ ವಿನಯ್‌ (ಬಿಎಸಿ)–2, ವೇದಾ ಖನೋಳ್ಕರ್‌ (ಅಬಾ ಕ್ಲಬ್‌)–3. ಕಾಲ: 1 ನಿ 06.64ಸೆ; 50 ಮೀ ಬ್ಯಾಕ್‌ ಸ್ಟ್ರೋಕ್‌: ಬಾಲಕರು: ಸಮರ್ಥ್ ಗೌಡ (ಬಿಎಸಿ)–1, ಅಭಿಮನ್ಯು ನಂಬಿಯಾರ್‌ (ಡಾಲ್ಫಿನ್‌ ಅಕ್ವಾಟಿಕ್ಸ್‌)–2, ವಾಫಿ ಅಬ್ದುಲ್ ಹಕೀಮ್‌ (ಬಿಎಸಿ)–3. ಕಾಲ: 29.58ಸೆ; ಬಾಲಕಿಯರು: ತನ್ಯಾ ಎಂ.ಎನ್‌ (ಬಿಎಸಿ)–1, ವೇದಾ ಖನೋಳ್ಕರ್‌ (ಅಬಾ ಕ್ಲಬ್‌)–2, ತನ್ಮಯಿ ಧರ್ಮೇಶ್‌ (ಗ್ಲೋಬಲ್‌ ಈಜುಕೇಂದ್ರ)–3. ಕಾಲ: 32.07; 200 ಮೀ ಮೆಡ್ಲೆ: ಬಾಲಕರು: ದಕ್ಷ್‌ ಮಟ್ಟ (ಬಿಎಸಿ)–1, ಡ್ಯಾನಿಯಲ್ ಪಾಲ್‌ (ಬಿಎಸಿ)–2, ಆರ್ಯನ್ ಮನೀಷ್‌ (ಬಿಎಸಿ)–3. ಕಾಲ: 2 ನಿ 17.14 ಸೆ; ಬಾಲಕಿಯರು: ತಸ್ಯಾ ಸೊನಾರ್‌ (ಪಿಎಂಎಸ್‌ಸಿ)–1, ತ್ರಿಶಾ ಸಿಂಧು (ಡಿಕೆವಿ ಈಜುಕೇಂದ್ರ)–2, ತನ್ಯಾ ಎಂ.ಎನ್‌ (ಬಿಎಸಿ)–3. ಕಾಲ: 2 ನಿ 30.78ಸೆ.

ನೈಶಾ ಶೆಟ್ಟಿ
ನೈಶಾ ಶೆಟ್ಟಿ

ಗುಂಪು–3:

50 ಮೀ ಬ್ಯಾಕ್‌ಸ್ಟ್ರೋಕ್‌: ಬಾಲಕರು: ಶ್ಲೋಕ್ ಜಾಧವ್‌ (ಅಬಾ ಕ್ಲಬ್‌)–1, ನಿಖಿಲ್ ತೇಜ್ ರೆಡ್ಡಿ (ಬಿಎಸಿ)–2, ರಕ್ಷಿತ್ ಅನಿರುದ್ಧ ಕೋರೆ (ನೆಟ್ಟಕಲ್ಲಪ್ಪ ಈಜುಕೇಂದ್ರ)–3. ಕಾಲ: 35 ಸೆ; ಬಾಲಕಿಯರು: ಸುಮೇಧಾ ವಿ (ಡಿಕೆವಿ ಈಜುಕೇಂದ್ರ)–1, ಅವನಿ ಬೆಳ್ಳಿಯಪ್ಪ (ಡಿಕೆವಿ ಈಜುಕೇಂದ್ರ)–2, ಶ್ವಿತಿ ದಿವಾಕರ್‌ ಸುವರ್ಣ (ಡಾಲ್ಫಿನ್‌ ಅಕ್ವಾಟಿಕ್ಸ್‌)–3. ಕಾಲ: 35.96 ಸೆ; 200 ಮೀ ಫ್ರೀಸ್ಟೈಲ್‌: ಬಾಲಕರು: ರೋನಿತ್ ಅರುಣ್ ಕುಮಾರ್ (ಬೆಂಗಳೂರು ಸ್ವಿಮ್ಮಿಂಗ್ ಅಕಾಡೆಮಿ)–1, ಲೋಹಿತಾಶ್ವ ನಾಗೇಶ್‌ (ಡಿಕೆವಿ ಈಜುಕೇಂದ್ರ)–2, ವ್ಯಾಸ್‌ ವಿಜಯ್‌ (ಡಿಕೆವಿ ಈಜುಕೇಂದ್ರ)–3. ಕಾಲ: 2ನಿ 20.60 ಸೆ; ಬಾಲಕಿಯರು: ಸುಮನ್ವಿ ವಿ (ಡಿಕೆವಿ ಈಜುಕೇಂದ್ರ)–1, ಸ್ತುತಿ ಸಿಂಗ್‌ (ಬೆಂಗಳೂರು ಸ್ವಿಮ್ಮಿಂಗ್ ಅಕಾಡೆಮಿ)–2, ಸುಮೇಧಾ ವಿ (ಡಿಕೆವಿ ಈಜುಕೇಂದ್ರ)–3. ಕಾಲ: 2 ನಿ 25.52 ಸೆ; 200 ಮೀ ಮೆಡ್ಲೆ: ಬಾಲಕರು: ಲೋಹಿತಾಶ್ವ ನಾಗೇಶ್ (ಡಿಕೆವಿ ಈಜುಕೇಂದ್ರ)–1, ನಿಖಿಲ್ ತೇಜ್ ರೆಡ್ಡಿ (ಬಿಎಸಿ)–2, ರಾಮ್ ಪ್ರಕಾಶ್ (ಗ್ಲೋಬಲ್ ಈಜುಕೇಂದ್ರ)–3. ಕಾಲ: 2ನಿ 42.74ಸೆ; ಬಾಲಕಿಯರು: ಸುಮನ್ವಿ ವಿ (ಡಿಕೆವಿ ಈಜುಕೇಂದ್ರ)–1, ದಿಶಾ ಹೊಂಡಿ (ಅಬಾ ಕ್ಲಬ್‌)–2, ಅವನಿ ಬೆಳ್ಳಿಯಪ್ಪ (ಡಿಕೆವಿ ಈಜುಕೇಂದ್ರ)–3. ಕಾಲ: 2 ನಿ 45.26 ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT