ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಚಲ್‌ಗೆ ಹರ್ಡಲ್ಸ್‌ ಚಿನ್ನ

ಅಥ್ಲೆಟಿಕ್ಸ್‌: 200 ಮೀ. ಓಟದಲ್ಲಿ ಮಿಂಚಿದ ಅನಿಮೇಶ್
Published 14 ಅಕ್ಟೋಬರ್ 2023, 15:35 IST
Last Updated 14 ಅಕ್ಟೋಬರ್ 2023, 15:35 IST
ಅಕ್ಷರ ಗಾತ್ರ

ಬೆಂಗಳೂರು: ಸಿಂಚಲ್‌ ಕಾವೇರಮ್ಮ ಅವರು ಇಲ್ಲಿ ನಡೆಯುತ್ತಿರುವ 62ನೇ ರಾಷ್ಟ್ರೀಯ ಓಪನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದುಕೊಂಡರು.

ರೈಲ್ವೇಸ್‌ ತಂಡವನ್ನು ಪ್ರತಿನಿಧಿಸುತ್ತಿರುವ ಕರ್ನಾಟಕದ ಸಿಂಚಲ್‌, ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಸ್ಪರ್ಧೆಯನ್ನು  57.88 ಸೆ.ಗಳಲ್ಲಿ ಪೂರೈಸಿದರು.

ಪುರುಷರ 200 ಮೀ. ಓಟದಲ್ಲಿ ಒಡಿಶಾದ ಅನಿಮೇಶ್‌ ಕುಜೂರ್‌ ಅವರು 20.74 ಸೆ.ಗಳಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರು. ಅಮ್ಲಾನ್‌ ಬೊರ್ಗೊಹೈನ್‌ (20.75 ಸೆ.) ಅವರು 2021 ರಲ್ಲಿ ಸ್ಥಾಪಿಸಿದ್ದ ದಾಖಲೆ ಮುರಿದರು. ಮಹಿಳೆಯರ ವಿಭಾಗದ ಇದೇ ಸ್ಪರ್ಧೆಯನ್ನು ಪಂಜಾಬ್‌ನ ಕಮಲ್‌ಜೀತ್‌ ಕೌರ್‌ ಗೆದ್ದುಕೊಂಡರು.

ರೈಲ್ವೇಸ್‌ ತಂಡವನ್ನು ಪ್ರತಿನಿಧಿಸಿದ ಕರ್ನಾಟಕದ ಅಭಿನಯಾ ಶೆಟ್ಟಿ ಅವರು 1.76 ಮೀ. ಸಾಧನೆಯೊಂದಿಗೆ ಮಹಿಳೆಯರ ಹೈಜಂಪ್‌ನಲ್ಲಿ ಕಂಚು ತಮ್ಮದಾಗಿಸಿಕೊಂಡರು.

ಫಲಿತಾಂಶ: ಪುರುಷರ ವಿಭಾಗ: 200 ಮೀ. ಓಟ: ಅನಿಮೇಶ್‌ ಕುಜೂರ್‌ (ಒಡಿಶಾ; ಕಾಲ: 20.74 ಸೆ.)–1, ಅಕ್ಷಯ್‌ (ಸರ್ವಿಸಸ್‌)–2, ಶಶಿಕಾಂತ್‌ ಅಂಗಡಿ (ರೈಲ್ವೇಸ್‌)–3

400 ಮೀ. ಹರ್ಡಲ್ಸ್‌: ನಿಖಿಲ್‌ ಭಾರದ್ವಾಜ್ (ಪಂಜಾಬ್‌; ಕಾಲ: 50.45 ಸೆ.)–1, ವಿಜಯ್ ಮಲಿಕ್‌ (ಸರ್ವಿಸಸ್‌)–2, ರೋಹನ್‌ ಕಾಂಬ್ಳೆ (ಒಎನ್‌ಜಿಸಿ)–3

800 ಮೀ. ಓಟ: ಸತ್ಯದೇವ್‌ (ಹರಿಯಾಣ; ಕಾಲ: 1 ನಿ. 51.89 ಸೆ.)–1, ಅನುಕುಮಾರ್‌ (ಉತ್ತರಾಖಂಡ)–2, ಸೋಮನಾಥ್‌ ಚೌಹಾಣ್ (ರೈಲ್ವೇಸ್‌)–3

3,000 ಮೀ. ಸ್ಟೀಪಲ್‌ ಚೇಸ್‌: ಮೊಹಮ್ಮದ್‌ ಹಸನ್‌ (ಸರ್ವಿಸಸ್‌; ಕಾಲ: 8 ನಿ. 38.70 ಸೆ.)–1, ‍ಪ್ರಿನ್ಸ್‌ ರಾಜ್‌ ಮಿಶ್ರಾ (ರೈಲ್ವೇಸ್‌)–2, ಅಂಕಿತ್‌ ರಾಜೇಶ್‌ (ಸರ್ವಿಸಸ್‌)–3

ಟ್ರಿಪಲ್‌ ಜಂಪ್‌: ಅರುಣ್‌ ಎ.ಬಿ (ಸರ್ವಿಸಸ್‌; ದೂರ: 16.46 ಮೀ.)–1, ಕಾರ್ತಿಕ್‌ ಯು. (ಸರ್ವಿಸಸ್‌)–2, ಮೊಹಮ್ಮದ್‌ ಎಸ್‌.ಎನ್‌. (ತಮಿಳುನಾಡು)–3

ಮಹಿಳೆಯರ ವಿಭಾಗ: 200 ಮೀ. ಓಟ: ಕಮಲ್‌ಜೀತ್‌ ಕೌರ್‌ (ಪಂಜಾಬ್‌; ಕಾಲ: 23.66 ಸೆ.)–1, ಶ್ರಬನಿ ನಂದಾ (ಒಡಿಶಾ)–2, ಗಿರಿಧರಣಿ ರವಿಕುಮಾರ್‌ (ತಮಿಳುನಾಡು)–3

400 ಮೀ. ಹರ್ಡಲ್ಸ್‌: ಸಿಂಚಲ್ (ರೈಲ್ವೇಸ್‌; ಕಾಲ: 57.88 ಸೆ.)–1, ವೀರ್‌ಪಾಲ್‌ ಕೌರ್ (ಪಂಜಾಬ್‌)–2, ನಾನಿ (ರೈಲ್ವೇಸ್‌)–3

800 ಮೀ. ಓಟ: ಯಮುನಾ (ಮಹಾರಾಷ್ಟ್ರ; ಕಾಲ: 2 ನಿ. 1.95 ಸೆ.)–1, ಚಂದಾ (ರೈಲ್ವೇಸ್‌)–2, ಆಶಾಕಿರಣ್‌ ಬಾರ್ಲ (ಜಾರ್ಖಂಡ್‌)–3

ಹೆಪ್ಟಥ್ಲಾನ್‌: ಸೋನು ಕುಮಾರಿ (ರೈಲ್ವೇಸ್‌; 4,933 ಪಾಯಿಂಟ್ಸ್)–1, ತನು (ರೈಲ್ವೇಸ್‌)–2, ಪೂಜಾ (ಹರಿಯಾಣ)–3

ಜಾವೆಲಿನ್‌ ಥ್ರೋ: ಜ್ಯೋತಿ (ಹರಿಯಾಣ; ದೂರ: 53.59 ಸೆ.)–1, ಕರಿಷ್ಮಾ ಸನಿಲ್‌ (ರೈಲ್ವೇಸ್‌)–2, ಪ್ರಿಯಾಂಕಾ (ಹರಿಯಾಣ)–3

ಹೈಜಂ‍ಪ್‌: ಪೂಜಾ (ಹರಿಯಾಣ; ಎತ್ತರ: 1.81 ಮೀ.)–1, ಏಂಜೆಲ್‌ ದೇವಸ್ಯ (ರೈಲ್ವೇಸ್‌)–1, ಅಭಿನಯಾ ಶೆಟ್ಟಿ (ರೈಲ್ವೇಸ್‌)–3

3,000 ಮೀ. ಸ್ಟೀಪಲ್‌ಚೇಸ್‌: ಕೋಮಲ್‌ ಜಗದಾಳೆ (ರೈಲ್ವೇಸ್‌; ಕಾಲ: 10 ನಿ. 32.14 ಸೆ.)–1, ಭಾಗ್ಯಶ್ರೀ ನವಲೆ (ಒಎನ್‌ಜಿಸಿ)–2, ಪ್ರೀನು ಯಾದವ್‌ (ರೈಲ್ವೇಸ್‌)–3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT