ಬೆಂಗಳೂರು: ಕರ್ನಾಟಕದ ಅಲಿಸ್ಸಾ ಸ್ವೀಡಲ್ ರೆಗೊ ರಾಷ್ಟ್ರೀಯ ಸಬ್‌ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಬಾಲಕಿಯರ 100 ಮೀಟರ್ಸ್ ಫ್ರೀಸ್ಟೈಲ್‌ನಲ್ಲಿ ಅಲಿಸ್ಸಾಗೆ ಪದಕ ಒಲಿಯಿತು. ಅವರು 1 ನಿಮಿಷ 7.81 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಇದೇ ವಿಭಾಗದಲ್ಲಿ ತ್ರೀಶಾ ಸಿಂಧು ಎಸ್. ಬೆಳ್ಳಿ ಗೆದ್ದರು.

ಬಾಲಕರ 100 ಮೀ. ಫ್ರೀಸ್ಟೈಲ್ (1 ನಿ. 5.73 ಸೆ.) ಮತ್ತು 50 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ (33.87ಸೆ.) ಶರಣ್ ಶ್ರೀಧರ್ ಬೆಳ್ಳಿ ಪದಕಗಳಿಗೆ ಮುತ್ತಿಟ್ಟರು. 100 ಮೀ. ಫ್ರೀಸ್ಟೈಲ್‌ನಲ್ಲಿಯೇ (1 ನಿ. 8.17 ಸೆ.) ವಿಹಾನ್ ಚತುರ್ವೇದಿ ಕಂಚು ಜಯಿಸಿದರು. 200 ಮೀ. ಮೆಡ್ಲೆಯಲ್ಲಿ (2 ನಿ. 44.58 ಸೆ.) ಜಸ್ ಸಿಂಗ್ ಕಂಚು, ಬಾಲಕಿಯರ 200 ಮೀ. ಮೆಡ್ಲೆಯಲ್ಲಿ (2 ನಿ. 50.95ಸೆ.) ಬೆಳ್ಳಿ ಗೆದ್ದರು.

ಬಾಲಕರ 4X50 ಮೀ. ಮೆಡ್ಲೆಯಲ್ಲಿ (2 ನಿ. 18.92 ಸೆ.) ಕರ್ನಾಟಕದ ಶರಣ್, ಜಸ್ ಸಿಂಗ್, ರೆಯಾನ್ಷ್ ಕಾಂತಿ ಮತ್ತು ಕೃಷ್ಣಾ ನಂದ ಕುಮಾರ್ ಅವರಿದ್ದ ತಂಡ ಬೆಳ್ಳಿ ಜಯಿಸಿತು.

ಬಾಲಕಿಯರ4X50 ಮೀ. ಮೆಡ್ಲೆಯಲ್ಲಿ (2 ನಿ. 24 ಸೆ.) ಆದ್ಯಾ ನಾಯರ್, ಅಲಿಸ್ಸಾ ಸ್ವೀಡಲ್ ರೆಗೊ, ಸಾನ್ವಿ ಮೈಗೂರ್ ಮತ್ತು ತ್ರೀಶಾ ಸಿಂಧು ಅವರಿದ್ದ ತಂಡವು ಕಂಚು ತನ್ನದಾಗಿಸಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.