ಟೋಕಿಯೊ: ಕ್ಯೂಬಾದ ಮಿಜಾಯಿನ್ ಲೊಪೆಜ್ ನ್ಯೂನೆಜ್ ಅವರು ಗ್ರೀಕೊ ರೋಮನ್ ಕುಸ್ತಿಯಲ್ಲಿ ಸತತ ನಾಲ್ಕನೇ ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆಗುವತ್ತ ದಾಪುಗಾಲಿಟ್ಟರು. ಕಳೆದ ಮೂರು ಕೂಟಗಳಲ್ಲಿ ಸೂಪರ್ ಹೆವಿವೇಟ್ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಅವರು ಭಾನುವಾರ ಇಲ್ಲಿ ಫೈನಲ್ ತಲುಪಿದ್ದಾರೆ.

ಮಕುಹಾರಿ ಮೆಸ್ಸೆ ಹಾಲ್ನಲ್ಲಿ ಎದುರಾಳಿಗಳಿಗೆ ಒಂದೂ ಪಾಯಿಂಟ್ಸ್ ಬಿಟ್ಟುಕೊಡದೆ ಮೂರು ಬೌಟ್ ಜಯಿಸಿ, ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು. 130 ಕೆಜಿ ವಿಭಾಗದ ಸೆಮಿಫೈನಲ್ ಹಣಾಹಣಿಯಲ್ಲಿ ಟರ್ಕಿಯ ರಿಜಾ ಕಯಾಲ್ಪ್ ಅವರನ್ನು 2–0ಯಿಂದ ಚಿತ್ ಮಾಡಿದ ಕ್ಯೂಬಾದ ಪೈಲ್ವಾನ, ಇದಕ್ಕೂ ಮೊದಲು ನಡೆದ ಎರಡು ಸುತ್ತುಗಳಲ್ಲಿ ಎದುರಾಳಿಗಳಿಗೆ ಭಾರಿ ಅಂತರದಿಂದ ಸೋಲುಣಿಸಿದ್ದರು.

ಮೊದಲ ಬೌಟ್ನಲ್ಲಿ 9–0ಯಿಂದ ರುಮೇನಿಯಾದ ಅಲಿನ್ ಅಲೆಕ್ಸುಕ್ ಸಿರಾರ್ಜು ಎದುರು, ಎರಡನೇ ಬೌಟ್ನಲ್ಲಿ 8–0ಯಿಂದ ಇರಾನ್ನ ಅಮಿನ್ ಮಿರ್ಜಾಜದೆಹ್ ವಿರುದ್ಧ ಜಯಭೇರಿ ಮೊಳಗಿಸಿದರು.

ಜಿಮ್ನಾಸ್ಟಿಕ್ಸ್: ಚಿನ್ನಕ್ಕೆ ಮುತ್ತಿಟ್ಟ ಇಸ್ರೇಲ್ನ ಡೊಲ್ಗೊಪ್ಯಾಟ್

ಟೋಕಿಯೊ ಕೂಟದಲ್ಲಿ ಚಿನ್ನ ಗೆದ್ದರೆ ಲೊಪೆಜ್, ನಾಲ್ಕು ಒಲಿಂಪಿಕ್ಸ್ಗಳಲ್ಲಿ ಚಾಂಪಿಯನ್ ಆದ ಮೊದಲ ಪುರುಷ ಕುಸ್ತಿಪಟು ಎನಿಸಿಕೊಳ್ಳಲಿದ್ದಾರೆ. ಜಪಾನ್ನ ಫ್ರೀಸ್ಟೈಲ್ ಕುಸ್ತಿಪಟು ಕವೊರಿ ಇಚೊ ಅವರು ವೈಯಕ್ತಿಕ ವಿಭಾಗದಲ್ಲಿ ಸತತ ನಾಲ್ಕು ಒಲಿಂಪಿಕ್ಸ್ಗಳಲ್ಲಿ ಚಿನ್ನ ಗೆದ್ದ ಮೊದಲ ಮಹಿಳೆ ಎನಿಸಿಕೊಂಡಿದ್ದಾರೆ.

ಫೈನಲ್ನಲ್ಲಿ 38 ವರ್ಷದ ಲೊಪೆಜ್, ಜಾರ್ಜಿಯಾದ ಇಯಾಕೊಬಿ ಕಜಾಜ ಅವರನ್ನು ಎದುರಿಸಲಿದ್ದಾರೆ. ಸೋಮವಾರ ಈ ಬೌಟ್ ನಿಗದಿಯಾಗಿದೆ.

ಲೊಪೆಜ್ ಅವರು 2008ರ ಬೀಜಿಂಗ್, 2012ರ ಲಂಡನ್ ಮತ್ತು 2016ರ ರಿಯೊ ಕೂಟಗಳಲ್ಲಿ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಮಿತಿ ಮೀರಿದ ಸಂಭ್ರಮದಲ್ಲಿ ಕಾಲಿಗೆ ಗಾಯ: ಬಾಕ್ಸರ್ ಒಲಿಂಪಿಕ್ಸ್ ಕನಸು ಭಗ್ನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.