ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಈಜು: ಸಮರ್ಥ್‌ ಕೂಟ ದಾಖಲೆ

Published 10 ಜುಲೈ 2024, 4:01 IST
Last Updated 10 ಜುಲೈ 2024, 4:01 IST
ಅಕ್ಷರ ಗಾತ್ರ

ಬೆಂಗಳೂರು: ಬಸವನಗುಡಿ ಈಜು ಕೇಂದ್ರದ ಸಮರ್ಥ್‌ ಗೌಡ ಬಿ.ಎಸ್‌. ಇಲ್ಲಿ ನಡೆಯುತ್ತಿರುವ ಎನ್‌ಆರ್‌ಜೆ ರಾಜ್ಯ ಸಬ್‌ ಜೂನಿಯರ್‌ ಮತ್ತು ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಬಾಲಕರ (2ಎ ಗುಂಪು) 100ಮೀ ಬ್ಯಾಕ್‌ಸ್ಟ್ರೋಕ್‌ ಸ್ಪರ್ಧೆಯಲ್ಲಿ ಕೂಟ ದಾಖಲೆ ನಿರ್ಮಿಸಿದರು. 

ಸಮರ್ಥ್ 1ನಿಮಿಷ 00.31 ಸೆಕೆಂಡಿನಲ್ಲಿ ಗುರಿ ಮುಟ್ಟಿದರು. ಬಿಎಸಿಯ ಆಡ್ರಿಯನ್ ನೀಲ್ ಸೆರಾವೊ (1ನಿ. 07.45ಸೆ) ಮತ್ತು ನೆಟ್ಟಕಲ್ಲಪ್ಪ ಈಜು ಕೇಂದ್ರದ ಅಮೋಘ್ ಎಸ್. ಮದ್ದಾನಿಮಠ (1ನಿ. 08.37ಸೆ) ಕ್ರಮವಾಗಿ ನಂತರದ ಸ್ಥಾನ ಪಡೆದರು. 2ಎ ಗುಂಪಿನ 50 ಮೀ ಬಟರ್‌ಫ್ಲೈ ಸ್ಪರ್ಧೆಯಲ್ಲೂ ಸಮರ್ಥ್ ಚಿನ್ನ ಗೆದ್ದರು.

ಫಲಿತಾಂಶಗಳು: ಬಾಲಕರು: 12-14 ವರ್ಷದೊಳಗಿನವರ 4x100 ಮೀ.  ಫ್ರೀಸ್ಟೈಲ್ ರಿಲೆ ಸ್ಪರ್ಧೆಯಲ್ಲಿ ಬಿಎಸಿ ‘ಎ’ ತಂಡ ‘ಎ’ (3ನಿ. 57.51ಸೆ). 2ಎ ಗುಂಪು: 200ಮೀ ಫ್ರೀಸ್ಟೈಲ್: ಅಕ್ಷಜ್ ಠಾಕುರಿಯಾ (ಡಾಲ್ಫಿನ್, 2ನಿ. 01.47ಸೆ), 100 ಮೀ. ಬ್ರೆಸ್ಟ್ ಸ್ಟ್ರೋಕ್: ಯಶ್ ಎಚ್. ಪಾಲ್  (ಬಿಎಸಿ, 1ನಿ. 13.61ಸೆ), 100 ಮೀ. ಬ್ಯಾಕ್ ಸ್ಟ್ರೋಕ್, ಸಮರ್ಥ್‌ ಗೌಡ ಬಿ.ಎಸ್‌. (ಬಿಎಸಿ, 1ನಿ. 00.31ಸೆ), 50 ಮೀ. ಬಟರ್‌ಫ್ಲೈ: ಸಮರ್ಥ್ ಗೌಡ ಬಿ.ಎಸ್. (ಬಿಎಸಿ, 27.32ಸೆ). 2ಬಿ ಗುಂಪು: 200 ಮೀ. ಫ್ರೀಸ್ಟೈಲ್: ಶರಣ್ ಎಸ್. (ಮತ್ಸ್ಯ, 2ನಿ. 03.20ಸೆ), 100 ಮೀ. ಬ್ರೆಸ್ಟ್‌ಸ್ಟ್ರೋಕ್: ರೆಯಾನ್ಶ್ ಕಂಠಿ ವೈ. (ಬಿಎಸಿ, 1ನಿ. 17.12ಸೆ), 100 ಮೀ. ಬ್ಯಾಕ್‌ಸ್ಟ್ರೋಕ್: ಅದ್ವೈತ ವಿ.ಎಂ. (ಬಿಎಸಿ, 1 ನಿ. 04.44 ಸೆ), 50 ಮೀ. ಬಟರ್‌ಫ್ಲೈ: ರೆಯಾನ್ಶ್ ಕಂಠಿ ವೈ. (ಬಿಎಸಿ, 28.86ಸೆ). 2ಸಿ ಗುಂಪು: 200 ಮೀ. ಫ್ರೀಸ್ಟೈಲ್: ಜಾಸ್ ಸಿಂಗ್ (ಎಸಿಇ, 2ನಿ. 15.79ಸೆ), 100 ಮೀ. ಬ್ರೆಸ್ಟ್ ಸ್ಟ್ರೋಕ್: ಚೇತನ್ ನಾಗರಾಜ ಗಣಪ (ಎನ್‌ಎಸಿ, 1ನಿ. 19.15ಸೆ), 100 ಮೀ. ಬ್ಯಾಕ್ ಸ್ಟ್ರೋಕ್: ಕ್ರಿಶ್ ಎಸ್.(ಬಿಎಸಿ, 1ನಿ. 11.62ಸೆ), 50 ಮೀ. ಬಟರ್ ಫ್ಲೈ: ವೇದಾಂತ್ ಮಿಸಾಲೆ (ಎಸ್‌ಸಿಬಿ, 30.70ಸೆ),

ಬಾಲಕಿಯರು: 2ಎ ಗುಂಪು: 200 ಮೀ. ಫ್ರೀಸ್ಟೈಲ್: ಸಂಜನಾ ಪಿ.ವಿ. (ಬಿಎಸಿ, 2ನಿ. 20.95ನಿ), 100 ಮೀ. ಬ್ರೆಸ್ಟ್ ಸ್ಟ್ರೋಕ್: ತಿಸ್ಯಾ ಸೋನಾರ್ (ಮತ್ಸ್ಯ, 1ನಿ. 20.35ಸೆ), 100 ಮೀ. ಬ್ಯಾಕ್‌ಸ್ಟ್ರೋಕ್: ನೈಶಾ (ಬಿಎಸಿ, 1ನಿ 07.92ಸೆ), 50 ಮೀ. ಬಟರ್‌ಫ್ಲೈ: ಫಣೀಂದ್ರನಾಥ್ ಚರಿತಾ (ಎಲೈಟ್, 30.44ಸೆ). ಗುಂಪು 2ಬಿ: 200 ಮೀ. ಫ್ರೀಸ್ಟೈಲ್: ತ್ರಿಶಾ ಸಿಂಧು (ಗ್ಲೋಬಲ್‌, 2ನಿ. 17.40ಸೆ), 100 ಮೀ. ಬ್ರೆಸ್ಟ್ ಸ್ಟ್ರೋಕ್: ಸ್ಪರ್ಶಾ ಎಸ್. ಹರೀಶ (ಮತ್ಸ್ಯ, 1ನಿ. 26.90ಸೆ), 100 ಮೀ. ಬ್ಯಾಕ್‌ಸ್ಟ್ರೋಕ್: ಆದ್ಯಾ ನಾಯರ್ (ಡಾಲ್ಫಿನ್, 1ನಿ. 12.95ಸೆ), 50 ಮೀ. ಬಟರ್‌ಫ್ಲೈ: ನಿಧಿ ಕುಲಕರ್ಣಿ (ಎಸ್‌ಸಿಬಿ, 31.63ಸೆ). 2ಸಿ ಗುಂಪು: 200 ಮೀ. ಫ್ರೀಸ್ಟೈಲ್: ಸುಮನ್ವಿ ವಿ. (ಡಿಕೆವಿ, 2ನಿ. 26.08ಸೆ), 100 ಮೀ. ಬ್ರೆಸ್ಟ್ ಸ್ಟ್ರೋಕ್ ಸುಮೇಧಾ ಡಿ.ವಿ. (ಡಿಕೆವಿ, 2ನಿ. 26.08ಸೆ), 50 ಮೀ. ಬಟರ್‌ಫ್ಲೈ: ಮಾನ್ಯಾ ಆರ್. ವಾಧ್ವಾ (ಪಿಎಂಎಸ್‌ಸಿ, 32.83ಸೆ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT