ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಒಲಿಂಪಿಕ್ಸ್‌ ಕೂಟ: ಸಿಂಗಲ್ಸ್‌, ಡಬಲ್ಸ್ ಆಡಲಿರುವ ಸಿನ್ನರ್‌

Published 15 ಜೂನ್ 2024, 4:31 IST
Last Updated 15 ಜೂನ್ 2024, 4:31 IST
ಅಕ್ಷರ ಗಾತ್ರ

ರೋಮ್‌: ಅಗ್ರ ಶ್ರೇಯಾಂಕದ ಯಾನಿಕ್ ಸಿನ್ನರ್ ಅವರು ಪ್ಯಾರಿಸ್‌ ಒಲಿಂಪಿಕ್‌ ಕ್ರೀಡೆಗಳ ಟೆನಿಸ್‌ ಸ್ಪರ್ಧೆಯ ಸಿಂಗಲ್ಸ್‌, ಡಬಲ್ಸ್‌ ಎರಡರಲ್ಲೂ ಆಡಲಿದ್ದಾರೆ ಎಂದು ಇಟಾಲಿ ಯನ್ ಟೆನಿಸ್‌ ಫೆಡರೇಷನ್ ಶುಕ್ರವಾರ ತಿಳಿಸಿದೆ.

ಸಿನ್ನರ್ ಪಾಲಿಗೆ ಮೊದಲ ಒಲಿಂಪಿಕ್ಸ್‌. ಒಲಿಂಪಿಕ್ಸ್‌ ಡಬಲ್ಸ್‌ನಲ್ಲಿ ಸಿನ್ನರ್, ಲೊರೆಂಝೊ ಮುಸೆಟ್ಟಿ ಅವರ ಜೊತೆ ಆಡುವರು. ಮಹಿಳಾ ಸಿಂಗಲ್ಸ್‌ನಲ್ಲಿ ಸೋತ ಇಟಲಿಯ ಆಟಗಾರ್ತಿ ಜಾಸ್ಮಿನ್ ಪಾವ್ಲೀನಿ ಅವರೂ ಇಟಲಿ ತಂಡದಲ್ಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಟೆನಿಸ್‌ ಸ್ಪರ್ಧೆಗಳು 27ರಂದು ಆರಂಭವಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT