ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ರೀಡಾ ಮಂಡಳಿಯಲ್ಲಿ ವಿನೇಶ್ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಕಾಲತ್ತು

Published : 9 ಆಗಸ್ಟ್ 2024, 5:26 IST
Last Updated : 9 ಆಗಸ್ಟ್ 2024, 5:26 IST
ಫಾಲೋ ಮಾಡಿ
Comments

ನವದೆಹಲಿ: ಕ್ರೀಡಾ ಮಂಡಳಿಯಲ್ಲಿ ಭಾರತದ ಅಥ್ಲೀಟ್ ವಿನೇಶ್ ಫೋಗಟ್ ಪರ ಹಿರಿಯ ವಕೀಲ ಹರೀಶ್ ಸಾಳ್ವೆ ವಕಾಲತ್ತು ವಹಿಸಲಿದ್ದಾರೆ.

ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹತೆಗೊಳಿಸಿದ ಒಲಿಂಪಿಕ್ಸ್ ಸಮಿತಿ ನಿರ್ಧಾರ ಪ್ರಶ್ನಿಸಿ ವಿನೇಶ್ ಫೋಗಟ್ ಅವರು ಕ್ರೀಡಾ ಮಂಡಳಿಗೆ ಅರ್ಜಿ ಸಲ್ಲಿಸಿದ್ದರು.

ಗುರುವಾರ ರಾತ್ರಿ ಭಾರತೀಯ ಕಾಲಮಾನ 9.30ರ ಒಳಗಾಗಿ ವಕೀಲರನ್ನು ನೇಮಕ ಮಾಡಬೇಕು ಎಂದು ಕ್ರೀಡಾ ಸಮಿತಿ ಸೂಚಿಸಿತ್ತು. ಫೋಗಟ್ ಪರ ವಾದ ಮಂಡಿಸಲು ಹರೀಶ್ ಸಾಳ್ವೆ ಒಪ್ಪಿಕೊಂಡಿದ್ದಾರೆ.

ಶುಕ್ರವಾರ ಪ್ಯಾರಿಸ್ ಸಮಯ ಬೆಳಿಗ್ಗೆ 10 ಗಂಟೆಗೆ (ಭಾರತೀಯ ಕಾಲಮಾನ ಮಧ್ಯಾಹ್ನ 1.30) ವಿಚಾರಣೆ ನಡೆಯಲಿದ್ದು, ಹರೀಶ್ ಸಾಳ್ವೆ ವಿಡಿಯೊ ಕಾನ್ಫರೆನ್ಸ್ ಮೂಲಕ ಭಾಗಿಯಾಗಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಸಾಳ್ವೆ ಅಲ್ಲದೆ, ಫೋಗಟ್ ಪರ ಇತರ ನಾಲ್ಕು ವಕೀಲರು ಪ್ಯಾರಿಸ್‌ನಲ್ಲಿ ಇರಲಿದ್ದಾರೆ.

ಮಹಿಳೆಯರ 50 ಕೆ.ಜಿ ಕುಸ್ತಿಯಲ್ಲಿ ಸ್ಪರ್ಧಿಸಿದ್ದ ಫೋಗಟ್, ಫೈನಲ್ ಪಂದ್ಯದ ವೇಳೆ ಕೇವಲ 100 ಗ್ರಾಂ ತೂಕ ಹೆಚ್ಚು ಇದ್ದಕ್ಕೆ ಅನರ್ಹಗೊಂಡಿದ್ದರು.

ಫೈನಲ್‌ವರೆಗೂ ನಿಯಮಬದ್ಧ ತೂಕವೇ ಇತ್ತು ಹೀಗಾಗಿ ಬೆಳ್ಳಿ ಪದಕಕ್ಕೆ ಪರಿಗಣಿಸಬೇಕು ಎಂದು ವಿನೇಶ್‌ ಕ್ರೀಡಾ ಮಂಡಳಿಯಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

(ಬಾರ್‌ ಆ್ಯಂಡ್ ಬೆಂಚ್‌ ವರದಿ ಆಧರಿಸಿದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT