ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿಂಪಿಕ್ಸ್: ಟ್ರ್ಯಾಕ್‌–ಫೀಲ್ಡ್ ವಿಭಾಗ ವಿಜೇತರಿಗೆ ನಗದು ಪ್ರಶಸ್ತಿ

Published 10 ಏಪ್ರಿಲ್ 2024, 23:30 IST
Last Updated 10 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಮೊನಾಕೊ: ಪ್ಯಾರಿಸ್ ಒಲಿಂಪಿಕ್ ಕೂಟದ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗದಲ್ಲಿ ಚಿನ್ನ ಜಯಿಸುವ ಅಥ್ಲೀಟ್‌ಗಳಿಗೆ ₹ 41.60 ಲಕ್ಷ  ನಗದು  ಪ್ರಶಸ್ತಿ ನೀಡಲು ವಿಶ್ವ ಅಥ್ಲೆಟಿಕ್ (ಡಬ್ಲ್ಯುಎ) ಸಂಸ್ಥೆ ತೀರ್ಮಾನಿಸಿದೆ. 

2028ರ ಲಾಸ್‌ ಏಂಜಲಿಸ್ ಒಲಿಂಪಿಕ್ ಕೂಟದಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಎಲ್ಲರಿಗೂ ನಗದು ಪ್ರಶಸ್ತಿ ನೀಡುವುದಾಗಿಯೂ ಸಂಸ್ಥೆಯು ಬುಧವಾರ ಘೋಷಿಸಿದೆ. 

‘ಈ ಮೂಲಕ ಒಲಿಂಪಿಕ್ ಕೂಟದಲ್ಲಿ ನಗದು ಪ್ರಶಸ್ತಿ ನೀಡಲಿರುವ ಮೊದಲ ಕ್ರೀಡಾ ಸಂಸ್ಥೆಯೆಂಬ ಹೆಗ್ಗಳಿಕೆಗೆ ಡಬ್ಲ್ಯು.ಎ ಪಾತ್ರವಾಗಲಿದೆ. ಅಥ್ಲೀಟ್‌ಗಳಿಗೆ ನಗದು ಪ್ರಶಸ್ತಿ ನೀಡಿ ಗೌರಿಸುವುದು ಆ ಕ್ರೀಡೆಯ ಉನ್ನತ ಯಶಸ್ಸಿನ ಪ್ರತೀಕವಾಗಿದೆ’ ಎಂದು ಡಬ್ಲ್ಯುಎ ಪ್ರಕಟಣೆಯಲ್ಲಿ ತಿಳಿಸಿದೆ.

ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಭಾರತದ ನೀರಜ್ ಚೋಪ್ರಾ ಅವರು ಜಾವೆಲಿನ್ ಥ್ರೋನಲ್ಲಿ ಚಿನ್ನದ ಪದಕ ಜಯಿಸಿದ್ದರು. ಟ್ರ್ಯಾಕ್‌ ಮತ್ತು ಫೀಲ್ಡ್ ವಿಭಾಗದಲ್ಲಿ ಈ ಸಾಧನೆ ಮಾಡಿದ  ಭಾರತದ ಮೊದಲ ಅಥ್ಲೀಟ್ ಆಗಿದ್ದರು. ಅವರು ಪ್ಯಾರಿಸ್‌ನಲ್ಲಿಯೂ ಚಿನ್ನ ಜಯಿಸುವ ನೆಚ್ಚಿನ ಅಥ್ಲೀಟ್ ಆಗಿದ್ದಾರೆ. 

‘ರಿಲೆ  ತಂಡಗಳಿಗೂ ಇದೇ ಮೊತ್ತವನ್ನು ನೀಡಲಾಗುವುದು. ತಂಡದೊಳಗಿನ ಅಥ್ಲೀಟ್‌ಗಳನ್ನು ಅದನ್ನು ಹಂಚಿಕೊಳ್ಳುವರು’ ಎಂದು ತಿಳಿಸಲಾಗಿದೆ. 

‘2015ರಲ್ಲಿ ನಾವು ಆರಂಭಿಸಿದ್ದ ಈ ಪಯಣದ ಮುಂದುವರಿದ ಭಾಗ ಇದಾಗಿದೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ)ಯಿಂದ ಬರುವ ಹಣವು ಒಲಿಂಪಿಕ್ ಕ್ರೀಡೆಗಳಿಗೆ ಮರಳಿ ಹೋಗುವಂತೆ ಮಾಡಿರುವುದು ಸಂತಸ ತಂದಿದೆ’ ಎಂದು ಡಬ್ಲ್ಯುಎ ಅಧ್ಯಕ್ಷ ಸೆಬಾಸ್ಟಿಯನ್ ಕೊ  ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT