ಪ್ಯಾರಿಸ್: ಫ್ರಾನ್ಸ್‌ನಲ್ಲಿ ಸಾಗುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದ ಮಹಿಳೆಯರ 53 ಕೆ.ಜಿ ವಿಭಾಗದಲ್ಲಿ ಭಾರತದ ಕುಸ್ತಿಪಟು ಅಂತಿಮ್ ಪಂಘಲ್ ಸೋಲು ಅನುಭವಿಸಿದ್ದಾರೆ.
ಇಂದು ನಡೆದ ಪಂದ್ಯದಲ್ಲಿ ಟರ್ಕಿಯ ಯೆಟ್ಗಿಲ್ ಝೆನೆಪ್ ವಿರುದ್ಧ ಅಂತಿಮ್ 10-0 ಅಂತರದ ಹೀನಾಯ ಸೋಲು ಕಂಡಿದ್ದಾರೆ.
ಅಂತಿಮ್‌ಗೆ ಇನ್ನೊಂದು ಅವಕಾಶ?
ಒಂದು ವೇಳೆ ಯೆಟ್ಗಿಲ್ ಝೆನೆಪ್ ಫೈನಲ್‌ಗೆ ಪ್ರವೇಶಿಸಿದ್ದಲ್ಲಿ 'ರೆಪೆಷಾಜ್' ಸುತ್ತಿನಲ್ಲಿ ಅಂತಿಮ್ ಇನ್ನೊಂದು ಅವಕಾಶವನ್ನು ಗಿಟ್ಟಿಸಿಕೊಳ್ಳಲಿದ್ದಾರೆ.
ಅನು, ಜ್ಯೋತಿಗೆ ನಿರಾಸೆ...
ಮಹಿಳೆಯರ ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಅನು ರಾಣಿ ಮತ್ತು ಮಹಿಳೆಯರ 100 ಮೀಟರ್ ಹರ್ಡಲ್ಸ್ ಮೊದಲ ಸುತ್ತಿನಲ್ಲಿ ಜ್ಯೋತಿ ಯರ್ರಾಜಿ ಪ್ರಭಾವಿ ಎನಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ.
31 ವರ್ಷದ ಅನು ರಾಣಿ, ಅರ್ಹತಾ ಸುತ್ತಿನಲ್ಲಿ 55.81 ಮೀಟರ್ ಜಾವೆಲಿನ್ ಎಸೆದು, 15ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಮತ್ತೊಂದೆಡೆ ಮಹಿಳೆಯರ 100 ಮೀಟರ್ ಹರ್ಡಲ್ಸ್ ಮೊದಲ ಸುತ್ತಿನಲ್ಲಿ ಜ್ಯೋತಿ, 7ನೇಯವರಾಗಿ (12.78 ಸೆಕೆಂಡು) ಗುರಿ ಮುಟ್ಟಿದರು. ಆ ಮೂಲಕ ಸೆಮಿಪೈನಲ್‌ಗೆ ಅರ್ಹತೆ ಗಿಟ್ಟಿಸುವಲ್ಲಿ ವಿಫಲರಾದರು.