ನವದೆಹಲಿ: ತೂಕ ಕಾಯ್ಡುಕೊಳ್ಳುವಲ್ಲಿ ವಿಫಲರಾಗಿ ಪ್ಯಾರಿಸ್ ಒಲಿಂಪಿಕ್ಸ್ ಫೈನಲ್‌ನಿಂದ ಅರ್ನಹಗೊಂಡಿರುವ ಕುಸ್ತಿಪಟು ವಿನೇಶಾ ಫೋಗಟ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಂತ್ವನದ ಮಾತುಗಳನ್ನು ಹೇಳಿ ಧೈರ್ಯ ತುಂಬಿದ್ದಾರೆ.
‘ವಿನೇಶಾ ಅವರೇ ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್ ಆಗಿದ್ದೀರಿ. ನಿಮ್ಮ ಬಗ್ಗೆ ಭಾರತವು ಹೆಮ್ಮೆ ಪಡುತ್ತದೆ. ಪ್ರತಿಯೊಬ್ಬರಿಗೂ ನೀವು ಸ್ಪೂರ್ತಿಯಾಗಿದ್ದೀರಿ’ ಎಂದು ಮೋದಿ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.
‘ಸ್ಪರ್ಧೆಯಲ್ಲಿ ನಿಮಗೆ ಹಿನ್ನೆಡೆಯಾಗಿರುವುದು ತುಂಬಾ ನೋವಿನ ಸಂಗತಿ. ಈ ಪದಗಳು ನಾನು ಅನುಭವಿಸುತ್ತಿರುವ ಹತಾಶೆಯನ್ನು ವ್ಯಕ್ತಪಡಿಸಬಹುದು. ಆದರೆ, ನೀವು ಈ ಸಂಕಷ್ಟದಿಂದ ಶೀಘ್ರವೇ ಹೊರಬರುತ್ತೀರಿ ಎಂಬುದನ್ನು ನಾನು ಬಲ್ಲೆ. ಸವಾಲುಗಳನ್ನು ಎದುರಿಸುವುದು ನಿಮ್ಮ ಸ್ವಭಾವವಾಗಿದೆ. ನಾವೆಲ್ಲರೂ ನಿಮ್ಮೊಂದಿಗಿದ್ದೇವೆ’ ಎಂದಿದ್ದಾರೆ.