ಕಳೆದ ವಾರಾಂತ್ಯದಲ್ಲಿ ನಡೆದ ಕಾರು ರೇಸ್ ರೋಚಕತೆಯಿಂದ ಕೂಡಿತ್ತು. ಅಂತಿಮ ಸುತ್ತಿಗೂ ಮುನ್ನ ಧೃವ್ ಹಾಗೂ ಆದಿತ್ಯ ನಡುವೆ ಕೇವಲ 1 ಅಂಕದ ಅಂತರವಿತ್ತು. ಆದರೆ, ಅಂತಿಮ ಸುತ್ತಿನಲ್ಲಿ ಅಮೋಘ ಪ್ರದರ್ಶನ ನೀಡಿದ ಧೃವ್ (183 ಅಂಕಗಳು), ಒಟ್ಟಾರೆ 4 ಅಂಕಗಳ ಅಂತರದಲ್ಲಿ ಆದಿತ್ಯರನ್ನು ಹಿಂದಿಕ್ಕಿದರು. ಓಜಸ್ ಸುರ್ವೆ 159 ಅಂಕಗಳೊಂದಿಗೆ 3ನೇ ಸ್ಥಾನ ಪಡೆದರು.